Advertisement

ನ್ಯೂಯಾರ್ಕ್‌ ಬ್ರೂಕ್ಲಿನ್‌ ರೈಲು ನಿಲ್ದಾಣದಲ್ಲಿ ಶೂಟೌಟ್‌: ಕನಿಷ್ಠ 16 ಮಂದಿಗೆ ಗಾಯ

01:28 AM Apr 13, 2022 | Team Udayavani |

ನ್ಯೂಯಾರ್ಕ್‌: ನಗರದ ಬ್ರೂಕ್ಲಿನ್‌ ರೈಲು ನಿಲ್ದಾಣದಲ್ಲಿ ಮಂಗಳ ವಾರ ನಡೆದ ಗುಂಡು ಹಾರಾಟ ಪ್ರಕರಣದಲ್ಲಿ ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ. ಅಪರಿಚಿತ ದುಷ್ಕರ್ಮಿ ಜನರು ಕಚೇರಿಗೆ ತೆರಳುವ ಸಂದರ್ಭವನ್ನೇ ನೋಡಿಕೊಂಡು ಈ ಕೃತ್ಯ ಎಸಗಿದ್ದಾನೆ.

Advertisement

ಸ್ಥಳೀಯ ಕಾಲಮಾನ ಬೆಳಗ್ಗೆ 8.30ರ ಸುಮಾರಿಗೆ ಬ್ರೂಕ್ಲಿನ್‌ನ ಸನ್‌ಸೆಟ್‌ ಪಾರ್ಕ್‌ನ ಸುತ್ತಮುತ್ತ ಗುಂಡು ಹಾರಾಟ ನಡೆಯಿತು. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ರೈಲು ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಜನರು ಗಾಬರಿಯಿಂದ ಓಡುತ್ತಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಲವರು ಗಾಯಗೊಂಡಿದ್ದರು.

ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನ್ಯೂಯಾರ್ಕ್‌ ಪೊಲೀಸರು ಸ್ಥಳದಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಿದ್ದಾರೆ. ಘಟನೆಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೂ ಮಾಹಿತಿ ನೀಡಲಾಗಿದೆ. ನ್ಯೂಯಾರ್ಕ್‌ ಮತ್ತು ವಾಷಿಂಗ್ಟನ್‌ನ ಎಲ್ಲ ರೈಲು ನಿಲ್ದಾಣಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next