Advertisement

ಲಸಿಕೆ ವಿತರಣೆಗೆ ಕನಿಷ್ಠ 48 ವಿತರಣೆ ಕೇಂದ್ರಗಳು: ಬಿಎಂಸಿ

07:54 PM Dec 13, 2020 | Suhan S |

ಮುಂಬಯಿ, ಡಿ. 12: ನಗರದ 1.24 ಕೋಟಿ ಜನಸಂಖ್ಯೆಗೆ ಕೋವಿಡ್‌ ಲಸಿಕೆ ನೀಡಲು ಬೃಹ ನ್ಮುಂಬಯಿ ಮಹಾನಗರ ಪಾಲಿ ಕೆಯು ಮುಂಬಯಿ ಯಾದ್ಯಂತ ಕನಿಷ್ಠ 48 ವಿತರಣೆ ಕೇಂದ್ರಗಳನ್ನು ಸ್ಥಾಪಿ ಸಲಿದೆ. ನಗರದ 24 ಆಡಳಿ ತಾತ್ಮಕ ವಾರ್ಡ್‌ಗಳಲ್ಲಿ ಎರಡರಿಂದ ಮೂರು ವ್ಯಾಕ್ಸಿನೇಶನ್‌ ಕೇಂದ್ರಗಳು ಇರಲಿವೆ ಎಂದು ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವ್ಯಾಕ್ಸಿನೇಶನ್‌ ಪ್ರಾರಂಭವಾದ ಬಳಿಕ ನಗರದ ಪ್ರತಿಯೊಂದು ಮೂಲೆಯಲ್ಲೂ ಏಕಕಾ ಲದಲ್ಲಿ ವಿತರಣೆಯನ್ನು ಪ್ರಾರಂಭಿ ಸುತ್ತೇವೆ. ಪುರಸಭೆ ಔಷಧಾಲ ಯಗಳು, ನಾಗರಿಕ ಆಸ್ಪತ್ರೆಗಳು ಮತ್ತು ಶಾಲೆ ಗಳಲ್ಲಿ ಲಸಿಕೆ ವಿತರಣೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಎಲ್ಲ ವಾರ್ಡ್‌ ಗಳು ಈಗಾಗಲೇ ಇಂತಹ ತಾಣಗಳನ್ನು ಗುರುತಿಸಿವೆ. ಲಸಿಕೆ ಪ್ರಮಾಣವನ್ನು ಪರಿ ಗಣಿಸಿ ನಿರ್ದಿಷ್ಟ ತಾಪಮಾನವನ್ನು ಕಾಪಾಡಿ ಕೊಳ್ಳುವ ಅಗತ್ಯವಿರುತ್ತದೆ. ಇದಕ್ಕಾಗಿ ವ್ಯಾಕ್ಸಿ ನೇಶನ್‌ ಪ್ರಕ್ರಿಯೆಯು ನಡೆ ಯುತ್ತಿ ರುವಾಗ ಕೋಲ್ಡ್ ಸ್ಟೋರೇಜ್‌ ಅಗತ್ಯವಿರುತ್ತದೆ ಎಂದು ಬಿಎಂಸಿ ಹೆಚ್ಚುವರಿ ಮುನ್ಸಿ ಪಲ್‌ ಕಮಿಷನರ್‌ ಸುರೇಶ್‌ ಕಾಕಾನಿ ಹೇಳಿದ್ದಾರೆ.

ಕೇಂದ್ರಗಳ ಸಂಖ್ಯೆಹೆಚ್ಚಳ :  ಕೇಂದ್ರವು ಇದಕ್ಕಾಗಿ ಮಾರ್ಗಸೂಚಿಗಳನ್ನು ನೀಡಿದ ಬಳಿಕ ಅಂತಿಮ ವಿತರಣೆ ಯೋಜನ ಯನ್ನು ನಿರ್ಧರಿಸಲಾಗುತ್ತದೆ. ಲಸಿಕೆ ವಿತರಣೆಗೆ ಖಾಸಗಿ ಸಂಸ್ಥೆಗಳಿಗೆ ಅನು ಮತಿ ನೀಡಿದ ಬಳಿಕ ವಿತ ರಣೆ ಕೇಂದ್ರಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ, ಗುರುತಿಸಲ್ಪಟ್ಟ 1,25,000 ಮುಂಚೂಣಿ ಕಾರ್ಮಿಕರಿಗೆ  ಲಸಿಕೆ ನೀಡಲಾಗುವುದು ಎಂದು ಕಾಕಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next