ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್‌ನ ಮೈನೆನ ಲೆವಿಸ್ಟನ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ, ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಈ ಘಟನೆ ಬುಧವಾರ ತಡರಾತ್ರಿ ನಡೆದಿದ್ದು ಗುಂಡಿನ ದಾಳಿ ನಡೆಸಿದ ವ್ಯಕ್ತಿ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಆಂಡ್ರೊಸ್ಕೊಗಿನ್ ಕೌಂಟಿ ಶೆರಿಫ್ ಕಚೇರಿಯು ಶಂಕಿತನ ಎರಡು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದೆ, ಚಿತ್ರದಲ್ಲಿ ಕಾಣುವಂತೆ ವ್ಯಕ್ತಿ ಕೈಯಲ್ಲಿ ರೈಫಲ್ ಹಿಡಿದುಕೊಂಡಿರುವುದು ಕಂಡುಬಂದಿದ್ದು, ಸದ್ಯ ಈ ವ್ಯಕ್ತಿ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೌಂಟಿ ಶೆರಿಫ್ ಕಚೇರಿ ಮನವಿ ಮಾಡಿದೆ.
ಲೆವಿಸ್ಟನ್‌ನಲ್ಲಿರುವ ಸೆಂಟ್ರಲ್ ಮೈನೆ ವೈದ್ಯಕೀಯ ಕೇಂದ್ರವು ಗುಂಡಿನ ದಾಳಿಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದೆ.
ಸಿಎನ್‌ಎನ್ ಪ್ರಕಾರ, ಬುಧವಾರ ರಾತ್ರಿ ಲೆವಿಸ್ಟನ್‌ನಲ್ಲಿರುವ ರೆಸ್ಟೋರೆಂಟ್ ಮತ್ತು ಬೌಲಿಂಗ್ ಅಲ್ಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು ಒಟ್ಟು 22 ಮಂದಿ ಹತ್ಯೆಯಾಗಿದ್ದಾರೆ, ಬಂದೂಕುಧಾರಿ ಪತ್ತೆಯಾಗುವ ತನಕ ಯಾರು ಮನೆಯಿಂದ ಹೊರ ಬರದಂತೆ ಇಲ್ಲಿನ ಆಡಳಿತ ಜನರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ: Food Festival: ನಾಳೆಯಿಂದ ಮೂರು ದಿನ ತಿಂಡಿಪೋತರ ಹಬ್ಬ