Advertisement

ಅಫ್ಘಾನಿಸ್ಥಾನ : ತಾಲಿಬಾನ್‌ಉಗ್ರರ ಹೊಂಚು ದಾಳಿ; 22 ಪೊಲೀಸರು ಬಲಿ

04:31 PM Nov 26, 2018 | Team Udayavani |

ಹೇರತ್‌, ಅಫ್ಘಾನಿಸ್ಥಾನ : ಪಶ್ಚಿಮ  ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಉಗ್ರರು ನಡೆಸಿದ ಹೊಂಚು ದಾಳಿಗೆ ಕನಿಷ್ಠ 22 ಪೊಲೀಸರು ಮೃತಪಟ್ಟರೆಂದು ಆರೋಗ್ಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Advertisement

ಈಗಾಗಲೇ ಸಾಕಷ್ಟು ಸೈನಿಕರನ್ನು ಕಳೆದುಕೊಂಡಿರುವ ಅಫ್ಘಾನ್‌ ಸೇನೆಗೆ ಇದು ಇನ್ನೊಂದು ದೊಡ್ಡ ಪ್ರಹಾರವೆಂದು ತಿಳಿಯಲಾಗಿದೆ.

ಅಫ್ಘಾನಿಸ್ಥಾನದಲ್ಲಿ ಈಚಿನ ದಿನಗಳಲ್ಲಿ ಭದ್ರತಾ ಸಿಬಂದಿಗಳ ಮೇಲೆ ಉಗ್ರರ ಸರಣಿ ದಾಳಿಗಳು ನಡೆಯುತ್ತಿದೆ. ಫ‌ರಾ ಪ್ರಾಂತ್ಯದಲ್ಲಿ ನಡೆದಿರುವ ಈ ಹೊಸ ದಾಳಿಯಲ್ಲಿ 22 ಪೊಲೀಸರು ಹತರಾಗಿದ್ದಾರೆ. 

ಮೊನ್ನೆ ಶುಕ್ರವಾರವಷ್ಟೇ ಸೇನಾ ನೆಲೆಯೊಳಗಿನ ಮಸೀದಿಯೊಂದರ ಮೇಲೆ ತಾಲಿಬಾನ್‌ ಉಗ್ರರ ಆತ್ಮಾಹುತಿ ದಾಳಿ ನಡೆದಿತ್ತು.

ಇದೇ ವೇಳೆ 17 ವರ್ಷಗಳ ಸಮರವನ್ನು ಕೊನೆಗೊಳಿಸುವಂತೆ ತಾಲಿಬಾನ್‌ ಮನ ಒಲಿಸುವ ಯತ್ನಗಳು ಈಗ ಜಾರಿಯಲ್ಲಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next