Advertisement

ಮೊಗಾದಿಶು: ಶಬಾಬ್‌ ಉಗ್ರರ ಆತ್ಮಾಹುತಿ ದಾಳಿಗೆ 18 ಪೌರರು ಬಲಿ

12:33 PM Jun 15, 2017 | Team Udayavani |

ಮೊಗಾದಿಶು: ಸೊಮಾಲಿಯಾದ ರಾಜಧಾನಿಯಾಗಿರುವ ಮೊಗಾದಿಶು ವಿನಲ್ಲಿ ಇಂದು ಬೆಳಗ್ಗೆ  ಶಬಾಬ್‌ ಉಗ್ರರು ನೆರೆಯ ಎರಡು ರೆಸ್ಟೋರೆಂಟ್‌ ಗಳ ಮೇಲೆ ಆತ್ಮಾಹುತಿ ಕಾರ್‌ ಬಾಂಬ್‌ ದಾಳಿ ನಡೆಸಿದ ಪರಿಣಾಮವಾಗಿ 18 ಮಂದಿ ಮೃತಪಟ್ಟರು. 

Advertisement

ಇದನ್ನು ಅನುಸರಿಸಿ ಸರಕಾರ ನಡೆಸಿರುವ ಕಾರ್ಯಾಚರಣೆಯಲ್ಲಿ ಬಂದೂಕುಧಾರಿ ಉಗ್ರರನ್ನು ಹತ್ಯೆಗೈಯಲಾಗಿದ್ದು  ಕಾರ್ಯಾಚರಣೆಯು ಮುಗಿದಿರುವುದಾಗಿ ಸೊಮಾಲಿಯಾ ಭದ್ರತಾ ಸಚಿವಾಲಯದ ವಕ್ತಾರ ಮೊಹಮ್ಮದ್‌ ಅಹ್ಮದ್‌ ಅರಬ್‌ ತಿಳಿಸಿದ್ದಾರೆ. 

ಉಗ್ರರು ವ್ಯಾಪಾರೋದ್ಯಮ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ; ಅಮಾಯಕ ಪ್ರಜೆಗಳನ್ನು ಕೊಂದಿದ್ದಾರೆ; ಒಟ್ಟು 18 ಮಂದಿ ಪೌರರನ್ನು ಉಗ್ರರು ಕೊಂದಿದ್ದಾರೆ ಎಂದು ವಕ್ತಾರ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next