Advertisement

Dubai: ವಸತಿ ಕಟ್ಟಡಕ್ಕೆ ಬೆಂಕಿ; 16 ಮಂದಿ ಮೃತ್ಯು

12:39 PM Apr 16, 2023 | Team Udayavani |

ದುಬೈ: ಶ್ರೀಮಂತ ಗಲ್ಫ್ ಎಮಿರೇಟ್‌ನ ದುಬೈನಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 16 ಜನರು ಸಾವನ್ನಪ್ಪಿದ್ದಾರೆ ಮತ್ತು 9 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Advertisement

ನಗರದ ಹಳೆಯ ಭಾಗದಲ್ಲಿರುವ ಅಲ್-ರಾಸ್ ನೆರೆಹೊರೆಯಲ್ಲಿರುವ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ನಾಗರಿಕ ರಕ್ಷಣಾ ಪಡೆಯ ಪ್ರಕಾರ ಕಟ್ಟಡದಲ್ಲಿ ಸುರಕ್ಷತೆ ಮತ್ತು ಭದ್ರತಾ ಕ್ರಮಗಳ ಅನುಸರಣೆಯ ಕೊರತೆಯಿಂದ ಬೆಂಕಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಏಳು ಎಮಿರೇಟ್‌ಗಳಲ್ಲಿ ಒಂದಾದ ದುಬೈ, ಸುಮಾರು 3.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ, ಅವರಲ್ಲಿ ಸುಮಾರು 90 ಪ್ರತಿಶತ ವಿದೇಶಿಯರು ಇದ್ದಾರೆ .

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next