ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ಸೋಂಕು ಆರಂಭವಾದಾಗಿನಿಂದ ಹಿಡಿದು ಈವರೆಗೆ ಕನಿಷ್ಠ 1,15,000ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ(ಮೇ 24) ತಿಳಿಸಿದೆ.
ಇದನ್ನೂ ಓದಿ:ಹೊಳೆ ಬಬಲಾದಿ ಸ್ವಾಮೀಜಿ ವಾಣಿ ಅಪಾರ್ಥ ಮಾಡಿಕೊಂಡ ಭಕ್ತರು: ಮಠಕ್ಕೆ ಬಂದ ಸಾವಿರಾರು ಭಕ್ತರು
ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಭೆಯ ಉದ್ಘಾಟನೆಯ ವೇಳೆ ಮಾತಾಡಿದ ಡಬ್ಲ್ಯುಎಚ್ ಒ ಮಹಾನಿರ್ದೇಶಕ ಟೆಡ್ರೊಸ್ ಗೇಬ್ರೇಯೆಸಸ್, ಕೋವಿಡ್ 19 ಸೋಂಕಿನ ವಿರುದ್ಧ ವಿಶ್ವಾದ್ಯಂತ ಹೋರಾಡಿದ್ದ ಆರೋಗ್ಯ ಕಾರ್ಯಕರ್ತರ ತ್ಯಾಗವನ್ನು ಶ್ಲಾಘಿಸಿದರು.
ಕಳೆದ ಸುಮಾರು 18 ತಿಂಗಳುಗಳಿಂದ ವಿಶ್ವದಾದ್ಯಂತದ ಆರೋಗ್ಯ ಕಾರ್ಯಕರ್ತರು, ಸಿಬಂದಿಗಳು ಸಾವು-ಬದುಕಿನ ನಡುವೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದು ಟೆಡ್ರೊಸ್ ತಿಳಿಸಿದ್ದಾರೆ.
ಕೋವಿಡ್ 19 ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ವೇಳೆ ಅನೇಕರು ಸ್ವತಃ ಸೋಂಕಿಗೆ ಒಳಗಾಗಿದ್ದರು. ಅಂದಾಜಿನ ಪ್ರಕಾರ 1,15,000 ಆರೋಗ್ಯ ಕಾರ್ಯಕರ್ತರು ತಮ್ಮ ಅನುಪಮವಾದ ಸೇವೆ ನೀಡುತ್ತಲೇ ಸಾವನ್ನಪ್ಪಿರುವುದಾಗಿ ಟೆಡ್ರೊಸ್ ಹೇಳಿದರು.