ಚಿಂತಾಮಣಿ: ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಚಿಂತಾಮಣಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈಗ ಹುಣಸೆ ಹಣ್ಣಿನದೇ ಘಮಲು. ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ರಾಶಿ ರಾಶಿ ಹುಣಸೆ ಹಣ್ಣು ಕಾಣುತ್ತಿದ್ದು, ಹುಣಸೆ ಹಣ್ಣಿನ ಸುಗ್ಗಿ ಆರಂಭಗೊಂಡಿದೆ.
Advertisement
ಇಡೀ ರಾಜ್ಯದಲ್ಲಿ ಹುಣಸೆ ಮಾರುಕಟ್ಟೆಗೆ ಚಿಂತಾಮಣಿ ಹೆಸರುವಾಗಿದೆ. ವಾರದಲ್ಲಿ ಮಂಗಳವಾರ, ಭಾನುವಾರ ಹಾಗೂ ಶುಕ್ರವಾರ ಮಾತ್ರ ಇಲ್ಲಿ ಹುಣಸೆ ಹಣ್ಣಿನ ವಹಿವಾಟು ನಡೆಯುತ್ತಿದ್ದು, ಕೋಟ್ಯಾಂತರ ರೂ. ವಾಣಿಜ್ಯ ವಹಿವಾಟು ನಡೆದು ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರದ ಮಾರುಕಟ್ಟೆಗೆ ಹುಣಸೆ ಹರಿದು ಬರುತ್ತಿದೆ.
Related Articles
ಸದ್ಯ ಚಿಂತಾಮಣಿ ಮಾರುಕಟ್ಟೆ ಹುಣಸೆ ಕ್ವಿಂಟಾಲ್‌ಗೆ 3000 ರಿಂದ 5500 ರೂ. ವರೆಗೂ ಮಾರಾಟಗೊಳ್ಳುತ್ತಿದೆ. ಕಳೆದ ವರ್ಷ 4ರಿಂದ 6 ಸಾವಿರೂಗೆ ಕ್ವಿಂಟಾಲ್ ಮಾರಾಟಗೊಂಡಿತ್ತು. ಆದರೆ ಈ ವರ್ಷ ತುಸು ಕಡಿಮೆ ಆಗಿದೆ. ಈ ಬಾರಿ ಹುಣಸೆ ಇಳುವರಿ ಹೆಚ್ಚಾಗಿ ಬಂದಿರುವುದರಿಂದ ಬೆಲೆ ಕಡಿಮೆ ಆಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ನಡೆಯುವ ಹುಣಸೆ ಮಾರುಕಟ್ಟೆಯಲ್ಲಿ 15 ರಿಂದ 20 ಲಾರಿ ಲೋಡ್‌ನಷ್ಟು ಹುಣಸೆ ಬರುತ್ತಿದೆ.
Advertisement
ಎಪಿಎಂಸಿ ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ವಹಿವಾಟು ಶುರುವಾಗಿದೆ. ಪ್ರತಿ ವಾರದಲ್ಲಿ 3 ದಿನ ಮಾತ್ರ ಹುಣಸೆ ಹಣ್ಣಿನ ಖರೀದಿ ಮಾಡಲಾಗುತ್ತಿದೆ. ಹುಣಸೆ ಹಣ್ಣು ಮಾರುಕಟ್ಟೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಬೆಳೆಗಾರರು ಹುಣಸೆ ತರುತ್ತಿದ್ದಾರೆ.●ಎಂಎಂಎಸ್ ಶ್ರೀನಿವಾಸ್, ಹುಣಸೆ ವ್ಯಾಪಾರಿ. ■ ಎಂ.ಡಿ.ತಿಪ್ಪಣ್ಣ