Advertisement
“ನನಗೀಗ 40 ವರ್ಷ. ಸಾಧನೆಗೆ ಯಾವತ್ತೂ ವಯಸ್ಸು ಅಡ್ಡಿಯಾಗದು. ಟೋಕಿಯೋದಲ್ಲಿ ಮೂರನೇ ಚಿನ್ನ ಗೆಲ್ಲುವ ಹೊರತಾಗಿ ನಾನು ಬೇರೇನೂ ಆಲೋಚನೆ ಮಾಡುವುದಿಲ್ಲ’ ಎಂದು ಜಾವೆಲಿನ್ ಎಸೆತಗಾರ ಜಜಾರಿಯಾ ಹೇಳಿದರು.
Related Articles
Advertisement
“ಈ ಬಾರಿ ಅಭ್ಯಾಸ ಉತ್ತಮ ಮಟ್ಟದಲ್ಲೇ ಸಾಗಿದೆ. ಜೂನ್‌ನಲ್ಲಿ ಕೊನೆಯ ಸಲ ಅಭ್ಯಾಸ ನಡೆಸಿದ್ದೆ. ಆಗ 65.71 ಮೀ. ಎಸೆಯುವಲ್ಲಿ ಯಶಸ್ವಿಯಾಗಿದ್ದೆ. 40 ವರ್ಷದ ನಾನು 20 ವರ್ಷದ ಆ್ಯತ್ಲೀಟ್‌ಗಳ ಜತೆ ಅಭ್ಯಾಸ ಮಾಡಬೇಕಾದ್ದರಿಂದ ತರಬೇತಿ ಅವಧಿಯಲ್ಲಿ ಕೆಲವು ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳಬೇಕಾಯಿತು. 7 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ನನ್ನ ಪಾಲಿಗೆ 40 ಎನ್ನುವುದು ಕೇವಲ ಒಂದು ಸಂಖ್ಯೆ…’ ಎಂದರು.
ಮಕ್ಕಳೇ ದೊಡ್ಡ ಸ್ಫೂರ್ತಿ :
“ಕಳೆದ 7 ತಿಂಗಳಲ್ಲಿ ಒಮ್ಮೆ ಮಾತ್ರ ಮನೆಗೆ ಹೋಗಿದ್ದೆ. 10 ವರ್ಷದ ಮಗಳು ನನ್ನನ್ನು ಅರ್ಥ ಮಾಡಿಕೊಂಡಿದ್ದಾಳೆ. ಟೋಕಿಯೋದಿಂದ ಪದಕದೊಂದಿಗೆ ಮರಳಿದ ಬಳಿಕ ಸಂಭ್ರಮ ಆಚರಿಸೋಣ ಎಂದಿದ್ದಾಳೆ. ಆದರೆ ಮಗನಿಗೆ ನಾನು ಮನೆಗೆ ಮರಳಬೇಕೆಂಬ ಆಸೆ. ಇವರಿಬ್ಬರು ನನ್ನ ಪದಕ ಬೇಟೆಗೆ ದೊಡ್ಡ ಸ್ಫೂರ್ತಿ ಆಗಲಿದ್ದಾರೆ’ ಎಂದು ದೇವೇಂದ್ರ ಜಜಾರಿಯಾ ಹೇಳಿದರು.
ಪ್ಯಾರಾಲಿಂಪಿಕ್ಸ್ : ವಿದ್ಯಾರ್ಥಿಗಳಿಗೆ ಪ್ರವೇಶ? :
ಟೋಕಿಯೊ: ಜಪಾನ್‌ನಲ್ಲಿ ಕೊರೊನಾ ಕೇಸ್ ಏರುತ್ತಿರುವ ನಡುವೆಯೇ ಟೋಕಿಯೊ ಪ್ಯಾರಾಲಿಂಪಿಕ್ಸ್ ಕೂಟಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಬಗ್ಗೆ ಸಂಘಟನಾ ಸಮಿತಿ ಆಲೋಚಿಸುತ್ತಿದೆ.
ಟೋಕಿಯೊ ಗವರ್ನರ್ ಯುರಿಕೊ ಕೊçಕೆ ಕೂಡ ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಿಯ ತನಕ ಪೋಷಕರು ಮತ್ತು ಶಾಲೆಯವರು ಬೆಂಬಲ ನೀಡುತ್ತಾರೋ ಅಲ್ಲಿಯ ತನಕ ವಿದ್ಯಾರ್ಥಿಗಳನ್ನು ಸ್ಟೇಡಿಯಂಗೆ ಕಳುಹಿಸುವುದು ಕೊçಕೆ ಉದ್ದೇಶ. ಆಗ ಸುಮಾರು 1,40,000ದಷ್ಟು ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಈ ಅವಕಾಶ ಸಿಗುವ ಸಾಧ್ಯತೆ ಇದೆ.
ಪ್ಯಾರಾಲಿಂಪಿಕ್ಸ್ ಸೆ. 5ರ ತನಕ ನಡೆಯಲಿದೆ. ಸೆ. 12ರ ತನಕ ಟೋಕಿಯೋದಲ್ಲಿ ಕೊರೊನಾ ತುರ್ತು ಸ್ಥಿತಿ ಜಾರಿಯಲ್ಲಿದೆ. ಶನಿವಾರದ ತನಕ ಸತತ 4ನೇ ದಿನ ಜಪಾನ್ ರಾಜಧಾನಿಯಲ್ಲಿ 5 ಸಾವಿರ ಪಾಸಿಟಿವ್ ಕೇಸ್‌ಗಳು ಕಂಡುಬಂದಿವೆ. ರವಿವಾರ ಈ ಸಂಖ್ಯೆ ತುಸು ಕಡಿಮೆಯಾಗಿದೆ (4,392). ಈ ಆತಂಕದ ನಡುವೆಯೇ ಮಂಗಳವಾರದಿಂದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ.