ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಏಳು ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಶುಕ್ರವಾರ (ಸೆಪ್ಟೆಂಬರ್ 08) ಬಹುತೇಕ ಪ್ರಕಟಗೊಂಡಿದ್ದು, ಭಾರತೀಯ ಜನತಾ ಪಕ್ಷ ಮೂರು ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಒಂದು, ತೃಣಮೂಲ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜಾರ್ಖಂಡ್ ನ ಡುಮ್ರಿಯಲ್ಲಿ ಜೆಎಂಎಂ ಹಾಗೂ ಉತ್ತರಪ್ರದೇಶದ ಘೋಸಿಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Goa ; ಚಲನಚಿತ್ರ ನಿರ್ದೇಶಕರ ಕೆಮರಾ, ಚಿನ್ನದ ಸರ ಕಳವು: ಆರೋಪಿ ಬಂಧನ
ತ್ರಿಪುರಾದ ಧನ್ ಪುರ್ ಮತ್ತು ಬಾಕ್ಸಾನಗರ್ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉತ್ತರಾಖಂಡ್ ನಲ್ಲಿ ಬಿಜೆಪಿ ಜಯಗಳಿಸಿದೆ.
ವಿಪಕ್ಷಗಳ ಒಕ್ಕೂಟ (INDIA) ಕೇರಳದ ಪುದುಪಲ್ಲೈಯಲ್ಲಿ ಕಾಂಗ್ರೆಸ್ ಹಾಗೂ ಪಶ್ಚಿಮಬಂಗಾಳದ ಧುಗ್ ಪುರಿಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ಸಾಧಿಸಿದೆ. ಉತ್ತರಪ್ರದೇಶದ ಘೋಸಿಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಜಾರ್ಖಂಡ್ ನ ದುಮ್ರಿಯಲ್ಲಿ ದೇಬಿ ದೇವಿ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕೇರಳದಲ್ಲಿ ಕಾಂಗ್ರೆಸ್ ನ ಚಾಂಡಿ ಉಮ್ಮನ್, ತ್ರಿಪುರಾದಲ್ಲಿ ಬಿಜೆಪಿಯ ಟಫಾಜ್ಜಲ್ ಹುಸೈನ್, ಬಿಂದು ದೇವನಾಥ್, ಉತ್ತರಾಖಂಡ್ ನ ಬಾಗೇಶ್ವರ್ ದಲ್ಲಿ ಬಿಜೆಪಿಯ ಪಾರ್ವತಿ ದಾಸ್ ಹಾಗೂ ಪಶ್ಚಿಮಬಂಗಾಳದ ಧುಪ್ ಗುರಿಯ ಟಿಎಂಸಿಯ ನಿರ್ಮಲಾ ಚಂದ್ರ ರಾಯ್ ಜಯಗಳಿಸಿದ್ದಾರೆ.