Advertisement

ಅತ್ಯಾಚಾರಿಗಳಿಗೆ ಎಚ್ಚರಿಕೆ ನೀಡುವ ಅಸುರ ಸಂಹಾರ

05:56 AM Jan 30, 2019 | Team Udayavani |

ಸಾಮಾಜಿಕ ಕಳಕಳಿ ಇಟ್ಟುಕೊಂಡು ಬರುವ ಚಿತ್ರಗಳಿಗೆ ಲೆಕ್ಕವಿಲ್ಲ. ಈಗಾಗಲೇ ಆ ನಿಟ್ಟಿನಲ್ಲಿ ಸಾಕಷ್ಟು ಚಿತ್ರಗಳು ಬಂದಿವೆ. ಈಗ ಹೊಸಬರ “ಅಸುರ ಸಂಹಾರ’ ಚಿತ್ರ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜುಗೊಳ್ಳುತ್ತಿದೆ. ಶ್ರೀ ಚಂಡಿಕೇಶ್ವರಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಹರಿಪ್ರಸಾದ್‌ .ಆರ್‌.ಸಿ. ನಿರ್ಮಿಸುತ್ತಿರುವ “ಅಸುರ ಸಂಹಾರ’ ಚಿತ್ರವನ್ನು ಪ್ರಸಾದ್‌ ಅರಸು ನಿರ್ದೇಶನ ಮಾಡಿದ್ದಾರೆ.

Advertisement

ಕಥೆ, ಚಿತ್ರಕಥೆ ಅವರೇ ಬರೆದಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ, ಕೊಲೆ, ಸುಲಿಗೆಯಂತ ಕೃತ್ಯಗಳಿಗೆ ಕಾನೂನಿನಡಿ  ಅತಿ ಕಠಿಣವಾದ ಶಿಕ್ಷೆ ವಿಧಿಸಿದರೆ ಮುಂದಿನ ದಿನಗಳಲ್ಲಿ ಜರುಗಬಹುದಾದ ಇಂಥ ಕ್ರೂರ-ಪ್ರಕರಣಗಳಿಗೆ ಕಡಿವಾಣ ಹಾಕಿದಂತಾಗುತ್ತದೆ, ಇಂತಹ ಕೆಲಸ ಮಾಡುವುದಕ್ಕೆ ಮುನ್ನ ಪ್ರತಿಯೊಬ್ಬರೂ ಯೋಚಿಸಬೇಕು. ಅಂತಹ ಎಳೆ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ.

ಅಂದಹಾಗೆ, ಇದೊಂದು ಫ್ಯಾಮಿಲಿ ಸೆಂಟಿಮೆಂಟ್‌, ಕಾಮಿಡಿ ಜೊತೆಗೆ ಸಮಾಜಕ್ಕೆ ಸಂದೇಶ ಹೇಳುವಂಥ ಕಥೆ ಹೊಂದಿರುವ ಈ ಚಿತ್ರ. ಈ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವಂತಹ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಕೂಡ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್‌ ಮುಂದೆ ಹೋಗಲಿದೆ. ಈ ಚಿತ್ರಕ್ಕೆ ಲೋಕಿ ಸಂಗೀತ, ಬೆಟ್ಟೆಗೌಡ ಕಿಲಾರ ಮತ್ತು ಪ್ರವೀಣ್‌ ಶೆಟ್ಟಿ ಛಾಯಾಗ್ರಹಣ, ಡಿಫ‌ರೆಂಟ್‌ ಡ್ಯಾನಿ ಸಾಹಸ,

ಸ್ಟಾರ್‌ಗಿರಿ ನೃತ್ಯ ನಿರ್ದೇಶನ, ವಿನಯ್‌ ಕುಮಾರ್‌ ಕೂರ್ಗು ಸಂಕಲನ, ಸಂತೋಷ್‌ ನಾಯ್ಕ, ಪ್ರದೀಪ್‌, ಲೋಕಿ ಸಾಹಿತ್ಯ, ಪ್ರದೀಪ್‌ ಮತ್ತು ಟೀಮ್‌ ಸಂಭಾಷಣೆವಿದೆ, ಹರ್ಷಅರಸು, ಹರ್ಷಲಹನಿ, ಶಿವುಬಾಲಾಜಿ, ಧರ್ಮ ವೀಣಾ ಸುಂದರ್‌, ನ್ಯೂಸ್‌ ಪ್ರಕಾಶ್‌ ಅಶ್ವಿ‌ನ್‌, ರವಿಚಂದ್ರ (ಟಾಮಿ), ಹರಿಬ್ರಹ್ಮ, ದಿಕ್ಷಶೆಟ್ಟಿ, ವಿನಯ್‌, ಕಲ್ಕಿ ಆಂಜನೇಯ, ಪಲ್ಲವಿ, ನವೀನ್‌, ನಾಗ ಕುಣಿಗಲ್‌ ಇನ್ನು ಮುಂತಾದವರ ತಾರಬಳಗವಿದೆ.

Advertisement

Udayavani is now on Telegram. Click here to join our channel and stay updated with the latest news.

Next