Advertisement
ಡಿಸೆಂಬರ್ ಮೊದಲ ವಾರದಿಂದಲೇ ಇದು ಕಾರ್ಯಾರಂಭಿಸುವ ನಿರೀಕ್ಷೆಯಿದೆ.ಆರಂಭದಲ್ಲಿ ಬೆಂಗಳೂರಿನ ಹಳೆ ಏರ್‌ಪೋರ್ಟ್ ರಸ್ತೆಯ ಸಮೀಪ ತಾತ್ಕಾಲಿಕ ಕೇಂದ್ರ ಕಾರ್ಯಾ ರಂಭಗೊಳ್ಳಲಿದ್ದು, ಬಳಿಕ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಪೂರ್ಣಪ್ರಮಾಣದ ಕೇಂದ್ರ ಸ್ಥಾಪಿಸಲು ಇಸ್ರೋ ನಿರ್ಧರಿಸಿದೆ. ಸದ್ಯ ತಾತ್ಕಾಲಿಕ ಕೇಂದ್ರದಲ್ಲಿ ಕನಿಷ್ಠ 3 ರೀತಿಯ ಸಿಮ್ಯುಲೇಟರ್‌ಗಳು ಮತ್ತು ಇತರ ತರಬೇತಿ ವ್ಯವಸ್ಥೆಗಳಿದ್ದು, ಪಠ್ಯಕ್ರಮವೂ ಸಿದ್ಧವಾಗಿದೆ ಎಂದು ಇಸ್ರೋ ತಿಳಿಸಿದೆ.
ಹಳೆ ಏರ್‌ಪೋರ್ಟ್ ರಸ್ತೆಯಲ್ಲಿ ಐಎಎಂ ಮತ್ತು ಇಸ್ರೋ ಸ್ಯಾಟಲೈಟ್ ಇಂಟಿಗ್ರೇಷನ್ ಆ್ಯಂಡ್ ಟೆಸ್ಟಿಂಗ್ ಎಸ್ಟಾಬ್ಲಿಷ್‌ಮೆಂಟ್ (ಐಎಸ್‌ಐಟಿಇ) ಸಮೀಪದಲ್ಲೇ ಇರುವ ಯುಆರ್‌ಎಸ್‌ಎಸಿಗೆ ಸೇರಿರುವ ಪ್ರದೇಶದಲ್ಲಿ ತಾತ್ಕಾಲಿಕ ಕೇಂದ್ರ ಸ್ಥಾಪನೆಯಾಗಲಿದೆ. ಇಲ್ಲೇ ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತದೆ. ಇಲ್ಲಿ ಬೇರೆ ಬೇರೆ ರೀತಿಯ ಸಿಮ್ಯುಲೇಟರ್‌ಗಳಿದ್ದು, ಥಿಯರಿ ತರಗತಿಗಳಿಗೆ ಅಗತ್ಯವಿರುವಷ್ಟು ಸ್ಥಳಾವಕಾಶವೂ ಇದೆ ಎಂದು ಇಸ್ರೋ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಎಚ್‌ಎಸ್‌ಎಫ್ಸಿ) ನಿರ್ದೇಶಕ ಎಸ್. ಉಣ್ಣಿಕೃಷ್ಣನ್ ನಾಯರ್ ಹೇಳಿದ್ದಾರೆ. ತರಬೇತಿಗೆ ಅಗತ್ಯವಿರುವ ಪಠ್ಯಕ್ರಮ ಸಿದ್ಧವಾಗಿದೆ. ಬೋಧಕ ಸಿಬಂದಿಯ ಸಮಿತಿಯಲ್ಲಿ ಐಎಎಂ, ಐಐಎಸ್‌ಸಿ, ಐಐಟಿಯಂಥ ಸಂಸ್ಥೆಯ ಸದಸ್ಯರು, ರಾಕೇಶ್ ಶರ್ಮಾರಂಥ ಮಾಜಿ ಗಗನಯಾತ್ರಿಗಳು, ಇಸ್ರೋದ ಮಾಜಿ ನಿರ್ದೇಶಕರು, ಉಪನಿರ್ದೇಶಕರು ಇರಲಿದ್ದಾರೆ ಎಂದಿದ್ದಾರೆ.
Related Articles
– ಕೆ. ಶಿವನ್, ಇಸ್ರೋ ಅಧ್ಯಕ್ಷ
Advertisement