ವಾಷಿಂಗ್ಟನ್: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಗಗನಯಾತ್ರಿ ಸುನಿತಾ ಎಲ್.ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಮೂರನೇ ಬಾರಿಗೆ ಯಾನ ನಡೆಸಲು ಸಜ್ಜುಗೊಂಡಿದ್ದಾರೆ.
ಈ ಬಾರಿ ಅವರು, ಮೇ 6ರಂದು 3ನೇ ಬಾರಿಗೆ ಯಾನ ಕೈಗೊಳ್ಳಲಿದ್ದು, ಒಂದು ವಾರ ಐಎಸ್‌ಎಸ್‌ನಲ್ಲಿ ಇರಲಿದ್ದಾರೆ.
ಈ ಬಾರಿ ಅವರಿಗೆ ಬೋಯಿಂಗ್ ಸ್ಟಾರ್‌ಲಿಂಕ್ ಬಾಹ್ಯಾಕಾಶ ನೌಕೆಯ ಪೈಲಟ್ ಆಗಲು ತರಬೇತಿ ನೀಡಲಾಗುತ್ತಿದೆ ಎಂದು ನಾಸಾ ತಿಳಿಸಿದೆ.
ಸುನಿತಾ ಅವರ ಜತೆಗೆ ಮತ್ತೋರ್ವ ಗಗನಯಾತ್ರೆ ಬುಚ್ ವಿಲ್ಮೋರ್ ಕೂಡ ತೆರಳಲಿದ್ದು, ಮೇ6ರಂದು ಬಾಹ್ಯಾಕಾಶ ನೌಕೆ ಉಡಾವಣೆಯಾಗಲಿದೆ ಎಂದು ತಿಳಿಸಿದೆ. 2006 ಡಿ.9ರಿಂದ 2007 ಜೂ.22ರಂದು ಮೊದಲ ಬಾರಿಗೆ, 2012ರ ಜು.14ರಿಂದ ನ.18ರ ವರೆಗೆ ಸುನೀತಾ ಗಗನಯಾನ ಕೈಗೊಂಡಿದ್ದರು.
ಇದನ್ನೂ ಓದಿ: Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ