Advertisement

ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:18 AM Apr 17, 2022 | Team Udayavani |

ಮೇಷ:

Advertisement

ಆರೋಗ್ಯ ಸ್ಥಿರ. ಸಂದರ್ಭಕ್ಕೆ ಸರಿ ಯಾದ ಆಲೋಚನೆಯಿಂದ ಕೂಡಿದ ನಡೆ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಗುರುಹಿರಿಯರನ್ನು ಅನುಸರಿಸುವುದರಿಂದ ಕ್ಷೇಮ.

ವೃಷಭ:

ಪ್ರಯಾಣದಿಂದ ದೇಹಾಯಾಸ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಅಭಿವೃದ್ಧಿ. ಧಾರ್ಮಿಕ ಕೆಲಸಗಳಿಂದ ಮಾನಸಿಕ ನೆಮ್ಮದಿ. ಗೃಹೋಪಕರಣ ವಸ್ತುಗಳ ಸಂಗ್ರಹಕ್ಕೆ ಧನವ್ಯಯ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ಮಿಥುನ:

Advertisement

ನಿರೀಕ್ಷಿತ ಸ್ಥಾನ ಪ್ರಾಪ್ತಿ. ಅಧ್ಯಯನಶೀಲರಿಗೆ ಉತ್ತಮ ಗೌರವ ಆದರಗಳು ಸಿಗುವ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ.

ಕರ್ಕ:

ಆರೋಗ್ಯ ಗಮನಿಸಿ. ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಸ್ಪಷ್ಟತೆ ಇರಲಿ. ಆಸ್ತಿ ಕ್ರಯ ವಿಕ್ರಯ ವಿಚಾರದಲ್ಲಿ ಮುನ್ನಡೆ. ಮನೆಯಲ್ಲಿ ಸಂತಸದ ವಾತಾವರಣ.

ಸಿಂಹ:

ಗೃಹೋಪಕರಣ ವಸ್ತುಗಳ ಸಂಗ್ರಹಕ್ಕಾಗಿ ಧನವ್ಯಯ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಒತ್ತಡಗಳಿದ್ದರೂ ಕಾರ್ಯ ಪೂರೈಸುವಿರಿ. ಧನಾರ್ಜನೆಗೆ ಕೊರತೆ ಕಾಣದು. ಸಾಂಸಾರಿಕ ಸುಖ ತೃಪ್ತಿದಾಯಕ.

ಕನ್ಯಾ:

ಆರೋಗ್ಯ ಉತ್ತಮ. ಧನಾರ್ಜನೆ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸರಿಯಾದ ಯೋಜನೆಯಿಂದ ಕೂಡಿದ ಕಾರ್ಯ ವೈಖರಿ. ಸಹೋದರ ಸಹೋದ್ಯೋಗಿಗಳಿಂದ ಸಹಕಾಯ ಸಹಕಾರ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ತುಲಾ:

ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ಮಿತ್ರರ ಸಮಾಗಮ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಯೋಚಿಸಿದಂತೆ ಕಾರ್ಯ ಸಫ‌ಲತೆಯಿಂದ ಸಂತೋಷ. ಗುರುಹಿರಿಯರ ಸೂಕ್ತ ಮಾರ್ಗದರ್ಶನ ಲಭ್ಯ.

ವೃಶ್ಚಿಕ:

ಧೈರ್ಯ, ಶೌರ್ಯದಿಂದ ಕೂಡಿದ ಕಾರ್ಯ ವೈಖರಿ. ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ. ಅನಿರೀಕ್ಷಿತ ಗೌರವಾನ್ವಿತ ಧನ ಸಂಪತ್ತು ವೃದ್ಧಿ. ಧಾರ್ಮಿಕ ಕ್ಷೇತ್ರ ಸಂದರ್ಶನ. ದೂರದ ಮಿತ್ರರ, ಗುರುಹಿರಿಯರ ಸಹಕಾರ.

ಧನು:

ಸಂಸಾರದೊಂದಿಗೆ ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಧನ ಸಂಮೃದ್ಧಿ ಯಶಸ್ಸು, ಸುಖ ಸಂತೋಷ. ಆಸ್ತಿ ವಿಚಾರದಲ್ಲಿ ಮುನ್ನಡೆ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ.

ಮಕರ:

ಉತ್ತಮ ಆರೋಗ್ಯ. ಬಂಧು ಮಿತ್ರರ ಭೇಟಿ. ಗೃಹದಲ್ಲಿ ಪರಿಶ್ರಮ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಸಂತೋಷ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ನಿಮ್ಮ ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗ್ರತೆ ಇರಲಿ.

ಕುಂಭ:

ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ. ದೇವತಾನುಗ್ರಹವಿದೆ.

ಮೀನ:

ಆರೋಗ್ಯ ಗಮನಿಸಿ. ಹಿರಿಯರ ಮಾರ್ಗದರ್ಶನದ ಲಾಭ ಪಡೆಯಿರಿ. ಅನ್ಯರ ಮಾತಿಗೆ ಮರುಳಾಗಿ ಮೋಸ ಹೋಗುವ ಸಂಭವವಿದೆ ಜಾಗ್ರತೆಯಾಗಿರಿ. ಮಾತಿನಲ್ಲಿ ಸ್ಪಷ್ಟತೆ, ತಾಳ್ಮೆ ಅಗತ್ಯ. ಶುಭಮಂಗಳ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ. ಮನೆಯಲ್ಲಿ ಚರ್ಚೆಗೆ ಅವಕಾಶ ಕೊಡದಿರಿ.

Advertisement

Udayavani is now on Telegram. Click here to join our channel and stay updated with the latest news.

Next