Advertisement

ಕೇಂದ್ರದಿಂದ ನಿತ್ಯ 700 ಟನ್ ಆಕ್ಸಿಜನ್ ಪೂರೈಕೆಯಾದರೇ ದೆಹಲಿಗೆ ಸಮಸ್ಯೆಯಿಲ್ಲ : ಕೇಜ್ರಿವಾಲ್

06:49 PM May 06, 2021 | Team Udayavani |

ನವ ದೆಹಲಿ : ಆಕ್ಸಿಜನ್ ಕೊರತೆಯ ಕಾರಣದಿಂದಾಗಿ ನಾವು ದೆಹಲಿಯಲ್ಲಿ ಯಾರನ್ನೂ ಸಾಯಲು ಬಿಡುವುದಿಲ್ಲವೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಕೇಂದ್ರ ಸರ್ಕಾರದಿಂದ ಪ್ರತಿದಿನ ದೆಹಲಿಗೆ 700 ಟನ್ ಆಕ್ಸಿಜನ್ ಪೂರೈಕೆಯಾದರೆ  ಆಮ್ಲಜನಕದ ಕೊರತೆಯಿಂದ ಸಾವಿನ ಪ್ರಶ್ನೆಯೇ ಬರುವುದಿಲ್ಲವೆಂದು ಅವರು ಹೇಳಿದ್ದಾರೆ.

ಇನ್ನು, 700 ಟನ್ ಗಳಷ್ಟು ಆಮ್ಲಜನಕದ ಸಮರ್ಪಕ ಪೂರೈಕೆ ಕೇಂದ್ರದಿದಂದ ಆದರೇ ದೆಹಲಿಯಲ್ಲಿ 9,000-9,500 ಹಾಸಿಗೆಗಳನ್ನು ಸ್ಥಾಪಿಸಲು ನಮಗೆ ಸಾಧ್ಯವಾಗುತ್ತದೆ. ದೆಹಲಿಯಲ್ಲಿ ಆಮ್ಲಜನಕದ ಕೊರತೆಯಿಂದ ನಾವು ಯಾರನ್ನೂ ಸಾಯಲು ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.

ಓದಿ : ಖಾಸಗಿ ಮೆಡಿಕಲ್ ಕಾಲೇಜುಗಳಿಂದ 75% ರಷ್ಟು ಹಾಸಿಗೆ ಪಡೆಯಲಾಗುತ್ತಿದೆ : ಸಚಿವ ಡಾ.ಕೆ.ಸುಧಾಕರ್

ಆಮ್ಲಜನಕದ ಬಿಕ್ಕಟ್ಟಿನಿಂದಾಗಿ, ಆಸ್ಪತ್ರೆಗಳು ತಮ್ಮ ಹಾಸಿಗೆಯ ಸಾಮರ್ಥ್ಯವನ್ನು ಕಡಿಮೆ ಮಾಡಬೇಕಾಗಿತ್ತು … ಈಗ ಎಲ್ಲಾ ಆಸ್ಪತ್ರೆಗಳು ತಮ್ಮ ಹಾಸಿಗೆಯ ಸಾಮರ್ಥ್ಯವನ್ನು ಪುನಃ ಹೆಚ್ಚಿಸುವಂತೆ ನಾನು ವಿನಂತಿಸುತ್ತೇನೆ. ಕೇಂದ್ರ ಸರ್ಕಾರದಿಂದ ನಾವು ಪ್ರತಿದಿನ 700 ಟನ್ ಆಮ್ಲಜನಕವನ್ನು ಸ್ವೀಕರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ” ಎಂದು ಕೇಜ್ರಿವಾಲ್ ಹೇಳಿದರು.

Advertisement

ದೆಹಲಿಯಂತಹ ರಾಜ್ಯಗಳಿಗೆ ಸಾಕಷ್ಟು ವೈದ್ಯಕೀಯ ಆಮ್ಲಜನಕವನ್ನು ಒದಗಿಸುವಲ್ಲಿ ಅಸಮರ್ಥತೆಗಾಗಿ ಕೇಂದ್ರ ಸರ್ಕಾರವನ ವ್ಯಾಪಕ ಟೀಕೆಗೆ ಒಳಗಾಗಿದ್ದು, ಅಂತರಾಷ್ಟ್ರೀಯ ಮಾಧ್ಯಮಗಳು ಕೂಡ ೀ ವೈಫಲ್ಯವನ್ನು ಎತ್ತಿ ತೋರಿಸಿವೆ.

ದೇಶದಾದ್ಯಂತ ಕೋವಿಡ್ ಸೋಂಕಿನ ಕಾರಣದಿಂದಾಗಿ ಕೆಲವು ದಿನಗಿಳಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ ಸೊಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಮಾತ್ರವಲ್ಲದೇ, ಆ್ಯಂಬುಲೆನ್ಸ್, ಹಾಸಿಗೆ, ಆಮ್ಲಜನಕದ ಕೊರತೆಯಾಗುತ್ತಿವೆ. ವಿದೇಶಗಳು ದೇಶಕ್ಕೆ ನೆರವಿನ ಹಸ್ತವನ್ನು ಚಾಚುತ್ತಿದ್ದರೂ ಕೂಡ ಸೋಂಕಿನ ಪ್ರಮಾಣವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.

ಇನ್ನು, ಆಮ್ ಆದ್ಮಿ ಪಕ್ಷ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು,  ದೆಹಲಿ ಸರ್ಕಾರವು ಕೇಂದ್ರ ಸರ್ಕಾರದಿಂದ ಕಡಿಮೆ ಪ್ರಮಾಣದಲ್ಲಿ ಆಮ್ಲಜನಕವನ್ನು ಸ್ವೀಕರಿಸುತ್ತಿದ್ದು, ನೆರೆಯ ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೇಂದ್ರ ನೀಡುತ್ತಿದೆ ಎಂದು ಆರೋಪಿಸಿದೆ.

ಓದಿ : ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next