Advertisement
ಉಪ್ಪುಂದ: ಈ ಭಾಗದ ಹೈನುಗಾರರನ್ನು ಉತ್ತೇಜಿಸಲು ಮತ್ತು ಗ್ರಾಮೀಣ ಸುಸ್ಥಿರ ಅಭಿವೃದ್ಧಿಯ ಸುಧಾರಣೆಯ ದೃಷ್ಠಿ ಯಿಂದ ಹುಟ್ಟಿಕೊಂಡಿದ್ದೇ ಉಪ್ಪುಂದ ಹಾಲು ಉತ್ಪಾದಕರ ಸಂಘ. ಇದಕ್ಕೀಗ 45 ವರ್ಷ.
ಆರಂಭದಲ್ಲಿ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 150ಮಂದಿ ಸದಸ್ಯರನ್ನು ಒಟ್ಟುಗೂಡಿಸಿ 1975ರಲ್ಲಿ ಉಪ್ಪುಂದದಲ್ಲಿರುವ ಕಂಬದಕೋಣೆ ರೈ.ಸೇ.ಸ.ಸಂಘದ ಕಟ್ಟಡದ ಒಂದು ಕೋಣೆಯಲ್ಲಿ ಹಾಲು ಉತ್ಪಾದಕರ ಸಂಘ ಆರಂಭವಾಗಿತ್ತು. ಆಗಿನ ಕಾಲದಲ್ಲಿ ಹಾಲಿಗೆ ಹೆಚ್ಚಿನ ದರ ಇಲ್ಲದಿದ್ದರೂ ಉಪ್ಪುಂದ, ಬಿಜೂರು, ನಂದನವನ ಗ್ರಾಮದ ನಿವಾಸಿಗಳು ಕುಂದಾಪುರದ ಡೈರಿಗಳಿಗೆ ಹಾಲುಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಮನಗಂಡ ಇಲ್ಲಿನ ನಾಗರಿಕರು ಹೈನುಗಾರಿಕೆಯನ್ನು ಉತ್ತೇಜಿಸಲು ಸ್ಥಳೀಯವಾಗಿಯೇ ಸಂಘ ಸ್ಥಾಪಿಸುವ ಕನಸು ಕಂಡಿದ್ದರು. ಅದರಂತೆಯೇ ಸಂಘವನ್ನೂ ಕಟ್ಟಿಕೊಂಡರು ಕೂಡ.
Related Articles
ಕಂಬದಕೋಣೆಯ ಬಳಿಕ 1995ವರೆಗೆ ಪರಮೇಶ್ವರ ವೈದ್ಯರ ಕಟ್ಟಡ, ಬಳಿಕ ಉಪ್ಪುಂದ ಗ್ರಾ.ಪಂ.ನ ಕೌಪೌಂಡ್‌ನ ವಿಶ್ವ ಕಾರ್ಯಾಗಾರ ಕಟ್ಟಡಲ್ಲಿ ಕಾರ್ಯನಿರ್ವಹಿಸಿ 1999ರಲ್ಲಿ ಗ್ರಾ.ಪಂ.ನ ವಠಾರದ ಸರಕಾರಿ ಜಾಗದಲ್ಲಿ ಸ್ವಂತ ಕಟ್ಟಡದಲ್ಲಿ ಸಂಘವೀಗ ಕಾರ್ಯನಿರ್ವಹಿಸುತ್ತಿದೆ.
Advertisement
ಸಕಲ ವ್ಯವಸ್ಥೆ2008ರಲ್ಲಿ 3 ಸಾವಿರ ಲೀ.ಸಾಮರ್ಥ್ಯದ ಬಿಎಂಸಿ ಘಟಕ ಸ್ಥಾಪಿಸಲಾಗಿದೆ. ಪ್ರಸುತ್ತ ಶಿರೂರಿನ ಆರ¾ಕಿ, ಯಡ್ತರೆ, ಕಲ್ಮಕಿ ಭಾಗದ ಡೈರಿಯ ಹಾಲು ಇಲ್ಲಿಗೆ ಬರುತ್ತದೆ. ಬಿಸಿ ನೀರಿನಿಂದ ಹಾಲಿನ ಪಾತ್ರೆ ತೊಳೆಯುವ ವ್ಯವಸ್ಥೆ, ಡ್ರೈನೇಜ್ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮಗಳು
ಹೈನುಗಾರಿಕೆ ತರಬೇತಿ ಶಿಬಿರ, ಜಾನುವಾರು ಪ್ರರ್ದನ, 2014ರ ವರೆಗೆ ಭಾರತೀಯ ಜೀವ ವಿಮಾ ನಿಗಮದ ಭೀಮಾ ಯೋಜನೆಯಡಿಯಲ್ಲಿ ಸಂಘದ ಸಹಕಾರದಿಂದ ಸುಮಾರು 400 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸದಸ್ಯರಿಗೆ ವಿವಿಧ ಸೌಲಭ್ಯಗಳ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂದಿನ ಸಮಯದಲ್ಲಿ 100ಲೀ.ಹಾಲು ಸಂಗ್ರಹವಾಗುತಿತ್ತು. ಪ್ರಸುತ್ತ 875 ಮಂದಿ ಸದಸ್ಯರನ್ನು ಒಳಗೊಂಡಿದ್ದು 280ಮಂದಿ ಹಾಲು ಹಾಕುತ್ತಿದ್ದಾರೆ. ನಿತ್ಯ 900ಲೀ.ಹಾಲು ಸಂಗ್ರಹವಾಗುತ್ತಿದೆ. ಉಪ್ಪುಂದ, ಬಿಜೂರು, ನಂದನವನ ಗ್ರಾಮದ ವ್ಯಾಪ್ತಿಯನ್ನು ಸಂಘ ಹೊಂದಿತ್ತು. ಇದೀಗ ಬಿಜೂರು, ಕೆರ್ಗಾಲು, ನಾಯ್ಕನಕಟ್ಟೆಯಲ್ಲಿ ಪ್ರತ್ಯೇಕವಾಗಿ ಹಾಲು ಉತ್ಪಾದಕರ ಸಂಘಗಳು ರಚನೆಯಾಗಿವೆ. ಪ್ರಶಸ್ತಿ
2005-2006ನೇ ಸಾಲಿನಲ್ಲಿ ದ.ಕ.ಹಾಲು ಒಕ್ಕೂಟದಿಂದ ಉತ್ತಮ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ. ಸುಬ್ರಹ್ಮಣ್ಯ ಪೂಜಾರಿ ಉಪ್ಪುಂದ, ನಾಗಪ್ಪ ಗಾಣಿಗ, ಶೇಷ ಪೂಜಾರಿ ಅತೀ ಹೆಚ್ಚು ಹಾಲು ಒದಗಿಸುವ ಹೈನುಗಾರರಾಗಿದ್ದಾರೆ. ಸಂಘದ ವತಿಯಿಂದ ರೈತರಿಗೆ ಪಶು ವೈದ್ಯರು ಸಿಗುವಂತೆ ಮಾಡಲು ಪಶು ಆಸ್ಪತ್ರೆ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಹಾಗೂ ಈ ಭಾಗದ ಎಲ್ಲ ಡೈರಿಗಳಿಂದ ಹಾಲನ್ನು ಸಂಗ್ರಹ ಮಾಡಿ ನಮ್ಮ ಸಂಘದಿಂದ ಮಾರಾಟ ಮಾಡುವ ಯೋಜನೆಯಿದೆ.
– ಚಂದ್ರ ಪೂಜಾರಿ,ಅಧ್ಯಕ್ಷರು -ಕೃಷ್ಣ ಬಿಜೂರು