Advertisement

ಸಹಾಯಕ ಪ್ರಾಧ್ಯಾಪಕರಿಗೆ “ಸಂಪನೂಲ’ತರಬೇತಿ

10:54 AM May 06, 2017 | Team Udayavani |

ಹುಬ್ಬಳ್ಳಿ: ಹೊಸದಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರನ್ನು ಕೇವಲ ಬೋಧಕರನ್ನಾಗಿಸದೆ, ಪರಿಪೂರ್ಣ ಹಾಗೂ ಪರಿಣಾಮಕಾರಿ ಮಾನವ ಸಂಪನ್ಮೂಲವಾಗಿಸಲು ಧಾರವಾಡ ಕೃಷಿ ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇರಿಸಿದ್ದು, ಪಂಚಗಣಿಯ “ಬದಲಾವಣೆ ಪ್ರಾರಂಭ'(ಇನಿಷಟಿವೇ ಆಫ್ ಚೇಂಜ್‌) ಕೇಂದ್ರ ಪ್ರಾಧ್ಯಾಪಕರ ಮನದಲ್ಲಿ ಬದಲಾವಣೆ ಪರ್ವದ ಬೀಜ ಬಿತ್ತನೆ ಮಾಡಿದೆ. ಇದು ರಾಜ್ಯದಲ್ಲೇ ಮೊದಲ ಯತ್ನವಾಗಿದೆ.

Advertisement

ಧಾರವಾಡ ಕೃಷಿ ವಿವಿಯಲ್ಲಿ ಇತ್ತೀಚೆಗೆ 3 ವಿಭಾಗಗಳ 80 ಜನ ಸಹಾಯಕ ಪ್ರಾಧ್ಯಾಪಕ/ ಸಹಾಯಕ ಗ್ರಂಥಪಾಲಕರಿಗೆ ಒಂದೇ ಸೂರಿನಡಿ ಪರಿಣಾಮಕಾರಿ ಬೋಧನೆ, ಆಡಳಿತ, ಕೆಸಿಎಸ್‌ ಆರ್‌, ಕೆಎಫ್ಸಿ, ಕೆಟಿಸಿ ಕಾಯ್ದೆ-ನಿಯಮ, ಬಜೆಟ್‌, ನೈತಿಕತೆ ಮತ್ತು ಮೌಲ್ಯಯುತ ಬದುಕು, ನಾಯಕತ್ವ, ಮಾನವೀಯ ಸಂಬಂಧ ಇನ್ನಿತರ ವಿಷಯಗಳ ಕುರಿತಾಗಿ 13 ದಿನಗಳ ತರಬೇತಿ ಕೈಗೊಳ್ಳಲಾಗಿದೆ. ಇಂತಹ ಕಾರ್ಯ ದೇಶದ ಒಂದೆರಡು ವಿವಿಗಳಲ್ಲಿ ಮಾತ್ರ ನಡೆಯುತ್ತಿದ್ದು, ಇಂತಹ ಸಾಧನೆಗೆ ಇದೀಗ ಧಾರವಾಡ ಕೃಷಿ ವಿವಿ ತನ್ನ ಹೆಸರು ದಾಖಲಿಸಿದೆ.

ಐಎಎಸ್‌-ಕೆಎಎಸ್‌ ತರಬೇತಿ ಪ್ರೇರಣೆ:
ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳಿಗೆ ಉತ್ತಮ ಆಡಳಿತ ನಡೆಸಲು ಸಮಗ್ರ ತರಬೇತಿ ನೀಡಲಾಗುತ್ತದೆ. ಆದರೆ, ಭವಿಷ್ಯದ ಸಮರ್ಥ ನಾಯಕರು ಹಾಗೂ ಮಾನವ ಸಂಪನ್ಮೂಲ ರೂಪಿಸುವ ಉಪನ್ಯಾಸಕರಿಗೆ ಅತ್ಯುತ್ತಮ
ತರಬೇತಿ ಅಗತ್ಯವಿದೆ ಎಂದು ಧಾರವಾಡ ಕೃಷಿ ವಿವಿ ಇಂತಹ ಕಾರ್ಯಕ್ಕೆ ಮುಂದಾಗಿದೆ.

69 ಸಹಾಯಕ ಪ್ರಾಧ್ಯಾಪಕರು ಭಾಗಿ: ಶಿಕ್ಷಣ, ವಿಸ್ತರಣೆ ಹಾಗೂ ಸಂಶೋಧನೆ ವಿಭಾಗಗಳಿಗೆ 80 ಜನ ಸಹಾಯಕ ಪ್ರಾಧ್ಯಾಪಕರು/ ಸಹಾಯಕ ಗ್ರಂಥಪಾಲಕರ ನೇಮಕವನ್ನು ಜಾಗತಿಕ ಮಟ್ಟದಲ್ಲಿ ಅರ್ಹತೆ ಆಧಾರದಲ್ಲಿ ಕೈಗೊಳ್ಳಲಾಗಿದ್ದು, ಇದರಲ್ಲಿ ಕೆಲವರು ವಿದೇಶಿಗರೂ ಇದ್ದಾರೆ. ಪ್ರಸ್ತುತ 69 ಜನರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಏ.24ರಿಂದ ತರಬೇತಿ ಆರಂಭವಾಗಿದ್ದು, ಮೇ 6ರವರೆಗೆ ನಡೆಯಲಿದೆ.

ಬೆಳಗ್ಗೆ 5.45ಗಂಟೆಗೆ ಯೋಗದೊಂದಿಗೆ ತರಬೇತಿ ಆರಂಭವಾಗುತ್ತಿದ್ದು, ವೃತ್ತಿ ನಿರ್ವಹಣೆ, ಬೋಧನೆ, ಸಂಶೋಧನೆ, ಆರ್ಥಿಕ ನಿಯಮ, ಆಡಳಿತ, ಭತ್ಯೆ, ನಾಯಕತ್ವ, ಮಾನವೀಯ ಸಂಬಂಧಗಳ ಕುರಿತಾಗಿ ತರಬೇತಿ ನೀಡಲಾಗುತ್ತಿದೆ.
ಪಂಚಗಣಿಯ ಐಒಎಫ್ಸಿ ಏಷ್ಯಾ ಪ್ರಸ್ಥಭೂಮಿ ಕೇಂದ್ರದಿಂದ 3 ದಿನಗಳವರೆಗೆ ಜೀವನದ ಆಯ-ವ್ಯಯ ಪಟ್ಟಿ, ಆಂತರಿಕ
ಪರಿಶೋಧನೆ, ಸ್ನೇಹಿತ, ಮಾರ್ಗದರ್ಶಿ ಹಾಗೂ ಗುರು, ಗೋ ಗ್ರೀನ್‌, ವಿಶ್ವಾಸ ನಿರ್ಮಾಣ, ಆರೋಗ್ಯ, ಸಂಬಂಧ, ಭಾವನೆಗಳ ನಿರ್ವಹಣೆ, ದೇಶ ಸುರಕ್ಷತೆ, ಭವಿಷ್ಯದ ದೃಷ್ಟಿಕೋನ ವಿಷಯಗಳ ಕುರಿತಾಗಿ ಮನನ ಮಾಡಲಾಗಿದೆ.

Advertisement

ಜಲತಜ್ಞ ಡಾ| ರಾಜೇಂದ್ರ ಸಿಂಗ್‌, ಹಿರಿಯ ಐಎಎಸ್‌ ಅಧಿಕಾರಿ ಅಶೋಕ ದಳವಾಯಿ, ನಿವೃತ್ತ ಅಧಿಕಾರಿ ಡಾ| ಶಿವಾನಂದ ಜಾಮದಾರ, ಡಾ| ರವೀಂದ್ರ ರಾವ್‌, ಕ್ಯಾಪ್ಟನ್‌ ಆನಂದ ಸೇರಿ ಸುಮಾರು 60ಕ್ಕೂ ಹೆಚ್ಚು ವಿವಿಧ ಸಾಧಕರು, ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದಾರೆ. ಕೃಷಿ ವಿವಿಯ ಡಾ| ಆರ್‌.ಎಸ್‌.ಪೊದ್ದಾರ,
ಡಾ| ಗೋಪಾಲ ಇನ್ನಿತರರು ತರಬೇತಿ ಸಂಘಟನೆ-ಸಂಯೋಜನೆ ಹೊಣೆ ಹೊತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next