Advertisement

ಅಶಕ್ತರಿಗೆ ನೆರವು: ದಾಭೋಲಿ ಶ್ರೀ ಕರೆ

11:05 AM Jun 01, 2017 | Harsha Rao |

ಬಂಟ್ವಾಳ: ಅಶಕ್ತರು, ಹಿಂದುಳಿದ ಕುಟುಂಬಗಳಿಗೆ ಸಹಾಯ ಹಸ್ತ ಚಾಚಬೇಕು ಹಾಗೂ ತಂದೆ, ತಾಯಿಯ ಸೇವೆಯನ್ನು ಪ್ರೀತಿಯಿಂದ ಮಾಡಬೇಕು ಎಂದು ಕುಡಾಳ್‌ ದೇಶಸ್ಥ ಆದ್ಯ ಗೌಡ್‌ ಬ್ರಾಹ್ಮಣ ಸಮಾಜದ ಶ್ರೀ ಮs… ಸಂಸ್ಥಾನ್‌ ದಾಭೋಲಿಯ ಕಿರಿಯ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. 

Advertisement

ಅವರು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ಆಶೀರ್ವಚನ ನೀಡಿದರು.

ಈ ಸಂದರ್ಭ ದ.ಕ. ಜಿಲ್ಲೆಯ ಸ್ವಾಗತ ಸಮಿತಿ ಅಧ್ಯಕ್ಷ ಡಿ. ರಮೇಶ್‌ ನಾಯಕ್‌ ಮೈರಾ, ಗೌರವಾಧ್ಯಕ್ಷರಾದ ಎಂ.ಎಂ. ಪ್ರಭು ಮಂಗಳೂರು, ಗಣಪತಿ ಶೆಣೈ ಡೆಚ್ಚಾರು, ಸದಾಶಿವ ರಾವ್‌, ಗಣೇಶ್‌ ಸ್ವೀಟ್‌, ಬೆಂಗಳೂರು, ಗೌರವ ಸಲಹೆಗಾರರಾದ ವೇ| ಮೂ| ಸಂಜೀವ ಭಟ್‌ ಕಟ್ಟಣಿಗೆ, ನಿತ್ಯಾನಂದ ಭಟ್‌ ಬರೆಪ್ಪಾಡಿ, ಉಪಾಧ್ಯಕ್ಷರಾದ ಸಂಜಯ್‌ ಪ್ರಭು ಮಂಗಳೂರು, ನಾರಾಯಣ ನಾಯಕ್‌ ದರ್ಬೆ, ಪ್ರೇಮ್‌ನಾಥ್‌ ನಾಯಕ್‌ ಸೋಲ್ತಾಡಿ, ರಾಜರಾಮ್‌ ನಾಯಕ್‌ ಕಲಾಯಿ, ವಾಸುದೇವ ನಾಯಕ್‌ ಇನೋಳಿ, ಸುಧಾಕರ ಶೆಣೈ ಮರೋಳಿ, ಪ್ರಧಾನ ಕಾರ್ಯದರ್ಶಿ ಡಾ| ವಿಜಯಲಕ್ಷ್ಮೀ ನಾಯಕ್‌ ಮಂಗಳೂರು, ಕಾರ್ಯದರ್ಶಿಗಳಾದ ಡಾ| ಸುಚೇತ ಶೆಣೈ, ಮರೋಳಿ, ರಮೇಶ್‌ ನಾಯಕ್‌ ಗುಂಡೂರು, ಚಂದ್ರಶೇಖರ್‌ ಪ್ರಭು ಹೆನ್ನೂರು, ಕೋಶಾಧಿಕಾರಿ ಮೋಹನ್‌ ಪ್ರಭು ಅಡೆÂ, ನ್ಯಾಯವಾದಿ ರಾಜರಾಮ್‌ ನಾಯಕ್‌, ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಬಂಟ್ವಾಳ ಪುರಪ್ರವೇಶ, ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವರ ದರ್ಶನ, ಕಲ್ಯಾಣ ಮಂಟಪದಲ್ಲಿ ಶ್ರೀಗಳಿಂದ ಫಲ ಮಂತ್ರಾಕ್ಷತೆ, ಗುರುಕಾಣಿಕೆ ಸಮರ್ಪಣೆ, ಸಮಾರೋಪ ಸಮಾರಂಭ, ಪಾದುಕಾ ಪೂಜೆ, ಗುರುಭೋಜನ, ಸಮಾರಾಧನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next