Advertisement

ಮಸ್ತಕಾಭಿಷೇಕಕ್ಕೆ ಇನ್ನೂಸಿಕ್ಕಿಲ್ಲ ಕೇಂದ್ರದ ನೆರವು 

12:40 PM Dec 08, 2017 | |

ನವದೆಹಲಿ: ವಿಶ್ವವಿಖ್ಯಾತ ಶ್ರವಣಬೆಳಗೊಳದ ಗೊಮ್ಮಟೇಶನಿಗೆ ಮುಂದಿನ ವರ್ಷ ಫೆ.7ರಿಂದ 26ರವರೆಗೆ ನಡೆಯಲಿರುವ ಮಹಾ ಮಸ್ತಾಕಾಭಿಷೇಕಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಆರ್ಥಿಕ ಸಹಾಯಕ್ಕಾಗಿ ಕರ್ನಾಟಕ ಸರ್ಕಾರ ಎದುರು ನೋಡುತ್ತಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿಳಿಸಿದ್ದಾರೆ.

Advertisement

ಗುರುವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಪಶುಸಂಗೋಪನಾ
ಸಚಿವರೂ ಆದ ಮಂಜು, “”ಜೈನರ ಈ ಮಹಾ ಉತ್ಸವಕ್ಕಾಗಿ ಸಕಲ ಸಿದ್ಧತೆಗಳು ಶ್ರವಣಬೆಳಗೊಳದಲ್ಲಿ ಭರದಿಂದ ಸಾಗಿವೆ. ಈಗಾಗಲೇ ಶೇ. 75ರಷ್ಟು ತಯಾರಿ ಪೂರ್ಣಗೊಂಡಿವೆ. ರಾಜ್ಯ ಸರ್ಕಾರ, ಮಹಾ ಮಸ್ತಾಕಾಭಿಷೇಕಕ್ಕಾಗಿ 263 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ 88 ಕೋಟಿ ರೂ. ಗಳನ್ನು ಕ್ಷೇತ್ರಕ್ಕೆ ರಸ್ತೆ ಸಂಪರ್ಕ, ಇತರ ಮೂಲಸೌಕರ್ಯ ನೀಡಲು
ಬಳಸಲಾಗಿದೆ. ಈ ಮಹಾ ಹಬ್ಬಕ್ಕೆ ಇನ್ನೂ 500 ಕೋಟಿ ರೂ. ಹಣ ಬೇಕಿದ್ದು ಇದಕ್ಕಾಗಿ ಬಹು ಹಿಂದೆಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇದಕ್ಕಿನ್ನೂ ಉತ್ತರ ಸಿಕ್ಕಿಲ್ಲ” ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next