Advertisement

ಸಣ್ಣ ಕೈಗಾರಿಕೆಗಳಿಗೆ ನೆರವು: ವಿತ್ತ ಸಚಿವೆಗೆ ಪತ್ರ

11:21 PM Apr 08, 2020 | Sriram |

ಬೆಂಗಳೂರು: ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಎಂಎಸ್‌ಎಂಇ ಪುನಶ್ಚೇತನಕ್ಕೆ ಹಲವು ಸಲಹೆಗಳನ್ನು ನೀಡಿರುವ ಅವರು, ಈ ಲಾಕ್‌ಡೌನ್‌ ಅವಧಿಯನ್ನು “ಝೀರೋ ಅವಧಿ’ ಎಂದು ಪರಿಗಣಿಸಲು ಮನವಿ ಮಾಡಿದ್ದಾರೆ. ಮಾರ್ಚ್‌ ನಿಂದ ಸೆಪ್ಟಂಬರ್‌ವರೆಗಿನ ಸಾಲದ ಮೇಲಿನ 6 ತಿಂಗಳ ಬಡ್ಡಿ ಮನ್ನಾ, ಕಂಪೆನಿಗಳ ತೆರಿಗೆ ಮರುಪಾವತಿಗೆ ಸಮಯ ವಿಸ್ತರಣೆ, ಸ್ಥಳೀಯ ಸಂಸ್ಥೆಗಳ 6 ತಿಂಗಳುಗಳ ಆಸ್ತಿ ತೆರಿಗೆ ಸಹಿತ ಹಲವು ತೆರಿಗೆ ಮನ್ನಾ, ಜಿಎಸ್‌ಟಿ, ಪಿಎಫ್‌, ಇಎಸ್‌ಐ, ಟಿಡಿಎಸ್‌ ಮೇಲಿನ ದಂಡವನ್ನು ಮನ್ನಾ ಮಾಡಿ, ಈ ಉದ್ಯಮಗಳ ಪುನಶ್ಚೇತನಕ್ಕೆ ಹೆಲ್ಪ…ಲೈನ್‌ ಮತ್ತು ಕೇಂದ್ರ ಕಚೇರಿ ಸ್ಥಾಪಿಸಲು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next