Advertisement
ಈ ಸಂದರ್ಭ ಮಾತನಾಡಿದ ಅವರು ತಾಳಮದ್ದಳೆ ಹಾಗೂ ಯಕ್ಷಗಾನದಿಂದ ವ್ಯಕ್ತಿಯ ಬದುಕಿನ ಉನ್ನತಿಗೂ ನೆರವಾಗುತ್ತದೆ. ನಮ್ಮ ಕಲೆಗಳು ಸಂಸ್ಕೃತಿಯ ಜೀವಾಳ. ಕಲೆಯನ್ನು ಆಸ್ವಾದಿಸುತ್ತಲೇ ಅನೇಕರು ಬಹು ಸಾಧನೆಯನ್ನು ಮಾಡಿದವರು ಇದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದವರು ಹಮ್ಮಿಕೊಂಡಿರುವ ಅರ್ಥಾಂತರಂಗ ಸರಣಿ ಕಾರ್ಯಕ್ರಮ ಅರ್ಥವತ್ತಾಗಿದೆ. ಅರ್ಥಗಾರಿಕೆಯ ಒಳತೋಟಿಗಳನ್ನು ಕಲಿಯಲು ಇದು ಮಾರ್ಗದರ್ಶಿ ಎಂದು ಅಭಿಪ್ರಾಯಪಟ್ಟರು.ಖ್ಯಾತ ತಾಳಮದ್ದಳೆ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇಶನ ಹಾಗೂ ನಿರ್ವಹಣೆಯಲ್ಲಿ ಜರಗಿದ ಅರ್ಥಾಂತರಂಗದಲ್ಲಿ “ಆಶು ಸಂಭಾಷಣೆಯ ಆಯಾಮಗಳು, ಅನಿಸಿಕೆ, ಅವಲೋಕನ, ಸಂವಾದ’ ವಿಷಯವನ್ನೊಳಗೊಂಡ ಸಂವಾದಗಳು ಪ್ರಸ್ತುತಿಗೊಂಡವು. . ಗೋವಿಂದ ಭಟ್ ಅವರಿಂದ ಹಂಸಧ್ವಜನ ಪೀಠಿಕೆ ಹಾಗೂ ಸ್ವಗತ, ಈಶ್ವರ ಪ್ರಸಾದ ಧರ್ಮಸ್ಥಳ ಹಾಗೂ ಗೋವಿಂದ ಭಟ್ಟರಿಂದ ಸುಧನ್ವಾರ್ಜುನ ಸಂಭಾಷಣೆ, ರಾಧಾಕೃಷ್ಣ ಕಲ್ಚಾರ್ ಹಾಗೂ ಹರೀಶ ಬಳಂತಿಮೊಗರು ಅವರಿಂದ ಕೃಷ್ಣ ದೂರ್ವಾಸ ಸಂಭಾಷಣೆ, ರಾಮ ಭರತ ಸಂಭಾಷಣೆ ಮಂಡಿಸಲಾಯಿತು. ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಅಡೂರು ಲಕ್ಷಿ$¾àನಾರಾಯಣ, ಚಂದ್ರಶೇಖರ ಸರಪಾಡಿ ಭಾಗವಹಿಸಿದ್ದರು.