Advertisement

ದಕ್ಷಿಣ ಕೊರಿಯಾ ಸಂಸ್ಥೆಯಿಂದ ನೆರವು

01:45 PM May 22, 2021 | Team Udayavani |

ಬೆಂಗಳೂರು: ದಕ್ಷಿಣ ಕೊರಿಯಾ ಮೂಲದಸಿಯೋಲ್‌ ಸೆಮಿ ಕಂಡಕ್ಟರ್‌ ಸಂಸ್ಥೆಯು ಕೊರೊನಾ ನಿರ್ವಹಣೆಗೆ ಅಗತ್ಯವಾದ ವೈದ್ಯಕೀಯ ಪರಿಕರಗಳನೆರವು ನೀಡಿದೆ ಎಂದು ಕೊರೊನಾ ಕಾರ್ಯಪಡೆಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಶುಕ್ರವಾರ ನೆರವು ಸ್ವೀಕರಿಸಿ ಸುದ್ದಿಗಾರರ ಜತೆಮಾತನಾಡಿದ ಅವರು, ಸಿಯೋಲ್‌ ಸೆಮಿಕಂಡಕ್ಟರ್‌ಸಂಸ್ಥೆ 30 ಸಾವಿರ ಕೆ-94 ಮಾಸ್ಕ್, 20 ಸಾವಿರ ಮೆಡಿಕಲ್‌ ಗ್ಲೌಸ್‌ 25 ಸಾವಿರ ವಾಯು ಸಂಸ್ಕರಣಾ ಸಲಕರಣೆ, 100 ಪಿಪಿಇ ಕಿಟ್‌ ಒದಗಿಸಿದ್ದು ಇದನ್ನುಬೆಂಗಳೂರಿನ ಪಶ್ಚಿಮ ಭಾಗದಲ್ಲಿ ಬಳಕೆಮಾಡಲಾಗುವುದು ಎಂದು ಹೇಳಿದರು.ಹೊಂಗಿರಣ ಟ್ರಸ್ಟ್‌ ಮೂಲಕ ಈ ನೆರವುದೊರೆತಿದೆ. ಸುಮಾರು 7 ಕೋಟಿ ರೂ. ಮೊತ್ತದನೆರವು ಇದಾಗಿದೆ ಎಂದು ತಿಳಿಸಿದರು.

ಈಸಂದರ್ಭದಲ್ಲಿ ನಡೆದ ವರ್ಚುಯಲ್‌ ಸಭೆಯಲ್ಲಿಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಚುಂಗ್‌ಹೂನ್‌ ಲೀ ಭಾಗಿಯಾಗಿದ್ದರು. ಭಾರತೀಯಉಪಾಧ್ಯಕ್ಷ ಅರ್ಷಿ ಕೃಷ್ಣಚಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next