Advertisement

ಸಹಕಾರ ಬ್ಯಾಂಕ್‌ ಸ್ಥಾಪನೆಗೆ ಸಹಾಯ

01:10 PM Jan 06, 2020 | Lakshmi GovindaRaj |

ಕೆ.ಆರ್‌.ನಗರ: ತಾಲೂಕು ನಾಯಕರ ಸಂಘಟನೆಗಳ ವತಿಯಿಂದ ಸಹಕಾರ ಬ್ಯಾಂಕು ಸ್ಥಾಪನೆಗೆ ಮುಂದಾದರೆ, ಅದಕ್ಕೆ ಅನುಮತಿ ಹಾಗೂ ಎಲ್ಲಾ  ರೀತಿಯ ಸಹಕಾರ ನೀಡಲಾಗು ವುದು ಎಂದು ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ಭರವಸೆ ನೀಡಿದರು. ಪಟ್ಟಣದ ವಾಲ್ಮೀಕಿ ನಾಯಕರ  ಸಮು ದಾಯ ಭವನದಲ್ಲಿ ತಾಲೂಕು ನಾಯಕರ ಸಂಘ ಮತ್ತು ತಾಲೂಕು ನಾಯಕರ ಕ್ಷೇಮಾ ಭಿವೃದ್ಧಿ ಸಂಘಗಳ ಆಶ್ರಯದಲ್ಲಿ ಭಾನುವಾರ ನಡೆದ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಮತ್ತು ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಸಂಘಟನೆ ಹೆಸರಲ್ಲಿ ರಾಜಕಾರಣ ಬೇಡ: ಸಮುದಾಯದ ಹೆಸರಿನಲ್ಲಿ ವಿನಾಯಿತಿ ಪಡೆದು ನೌಕರಿ ಪಡೆದಿರುವವರು ಬಡ ವಿದ್ಯಾರ್ಥಿಗಳಿಗೆ ಸಹಕಾರ  ನೀಡಬೇಕು,. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಗಳಲ್ಲಿ ನಮ್ಮ ತಂದೆ ಚಿಕ್ಕಮಾದು ಶಾಸಕರಾಗಿದ್ದ ಅವಧಿಯಲ್ಲಿ ಜಾತಿ ಸಂಘಟನೆ  ಉತ್ತಮವಾಗಿ ಮಾಡಿದ್ದರು. ಅದನ್ನು ರಾಜ್ಯಾದ್ಯಂತ ವಿಸ್ತರಿಸಿ, ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಹೊಂದಲು ರಾಜನಹಳ್ಳಿ ವಾಲ್ಮೀಕಿ  ಪೀಠದ ಪ್ರಸನ್ನಾನಂದಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಜಾತಿ ಸಂಘಟನೆ ವಿಚಾರದಲ್ಲಿ  ಯಾರೂ ರಾಜಕಾರಣ ಮಾಡ ಬಾರದು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಕಲಿಸುವ ಗುರುಗಳ ಮೇಲೆ ಗೌರವ ಮತ್ತು ಮುಂದಿನ  ಗುರಿಯ ಸ್ಪಷ್ಟ ಖಚಿತತೆಯಿರಬೇಕು. ಎಲ್ಲರೂ ಸದಾ ಪೋಷಕರು ಮತ್ತು ಗುರುಗಳಿಗೆ ಉತ್ತಮ ಗೌರವ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.  ಎಲ್ಲ ರೀತಿಯ ಸಹಕಾರ ನೀಡುವೆ: ಮುಖ್ಯ ಅತಿಥಿ ಜಿಪಂ ಸದಸ್ಯ ಡಿ.ರವಿಶಂಕರ್‌ ಮಾತ ನಾಡಿ, ಪ್ರತಿಭಾ ಪುರಸ್ಕಾರ  ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲು ಕಾರಣವಾಗಲಿದೆ. ತಾಲೂಕು ನಾಯಕರ ಸಂಘದವರು ಕಳೆದ 12 ವರ್ಷ  ಗಳಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಿರುವುದು ಇತರರಿಗೆ ಮಾದರಿಯಾದ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಮುದಾಯ ಭವನ ನಿರ್ಮಿಸಬೇಕು: ಸಮುದಾಯದ ಸರ್ವರೂ ಮತ್ತು ಇನ್ನಿತರ ಎಲ್ಲಾ ಸಮಾಜದ ಚುನಾಯಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಉತ್ತಮ ಸಮುದಾಯ ಭವನ ನಿರ್ಮಿಸಬೇಕು. ಜತೆಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಇತರ ಸಮಾಜಮುಖೀ ಕೆಲಸಗಳನ್ನು ನಡೆಸುತ್ತಿರುವ  ಸಂಘದವರಿಗೆ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಎಸ್‌ ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರಸಲಾಯಿತು. ನಿವೃತ್ತ ನೌಕರರು ಮತ್ತು  ಸಾಧಕರನ್ನು ಸನ್ಮಾನಿಸಲಾಯಿತು. ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು. ತಾಲೂಕು ನಾಯಕರ ಸಂಘದ ಅಧ್ಯಕ್ಷ ಟಿ.ಎಸ್‌. ನರಸಿಂಹನಾಯಕ ಅಧ್ಯಕ್ಷತೆ ವಹಿಸಿ ದ್ದರು. ಮೈಸೂರಿನ ಬಿಜೆಪಿ ಮುಖಂಡ ಅಪ್ಪಣ್ಣ, ತಹಶೀಲ್ದಾರ್‌ ಎಂ.ಮಂಜುಳಾ, ಪುರಸಭೆ ಸದಸ್ಯ  ಡಿ.ಶಿವಕುಮಾರ್‌ ಮಾತನಾಡಿದರು.

Advertisement

ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಕೆ.ಸಿದ್ದೇಶ್ವರಪ್ರಸಾದ್‌, ಕಾರ್ಯದರ್ಶಿ  ಬಿ.ಎಸ್‌.ಕಿರಣ್‌ಕುಮಾರ್‌, ನಿರ್ದೇಶಕರಾದ ಸೋಮಶೇಖರ್‌, ದಾಸಪ್ಪ, ತುಳಸಿರಾಮನಾಯಕ, ನಾಯಕರ ಸಂಘದ  ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜು, ಗೌರವಾಧ್ಯಕ್ಷ ಎ.ಟಿ.ಶಿವಣ್ಣ, ಕಾರ್ಯದರ್ಶಿ ಎಸ್‌.ಪಿ.ಪರಮೇಶ್‌, ಖಜಾಂಚಿ ಮಹದೇವ ನಾಯಕ, ನಿರ್ದೇಶಕರಾದ ಚಿಕ್ಕನಾಯಕ,  ಬೆಟ್ಟನಾಯಕ, ನಾಗರಾಜ ನಾಯಕ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್‌.ಸಿ. ಕುಮಾರ್‌ ಮತ್ತಿತರರು ಕಾರ್ಯಕ್ರಮದಲ್ಲಿ  ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next