Advertisement

ವೀರಾಂಜನೇಯ ಸೇವಾ ಸಮಿತಿಯಿಂದ ನೆರವು

05:50 AM Aug 03, 2017 | Team Udayavani |

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಜಗದೀಶ್‌ ಶೆಟ್ಟಿ ಅವರು ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದು  ಆರ್ಥಿಕವಾಗಿ ಹಿಂದುಳಿದ ಇವರಿಗೆ ವೀರಾಂಜನೇಯ ಸೇವಾ ಸಮಿತಿ ಬೆಳ್ತಂಗಡಿ ಇವರ 9ನೇ ಸೇವಾ ಯೋಜನೆಯಾಗಿ ಗುಂಪಿನ ಸದಸ್ಯರ ನೆರವಿನಿಂದ ಸಂಗ್ರಹಿಸಿದ 10,000 ರೂ. ಹಸ್ತಾಂತರಿಸಲಾಯಿತು. 

Advertisement

ವೇಣೂರು ಪರಪ್ಪು ಬಳಿಯ ತುಳಸಿ ಅವರು ಪಿಯುಸಿ ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10ನೇ ಸೇವಾ ಯೋಜನೆಯಾಗಿ 5,000 ರೂ. ಹಸ್ತಾಂತರಿಸಲಾಯಿತು.

ಈ ಎರಡು ಸೇವಾ ಯೋಜನೆಗೆ ಒಟ್ಟು  15,000 ರೂ. ಸಹಾಯಧನವನ್ನು ನಂದಿಬೆಟ್ಟದ ಶ್ರೀ ನಂದಿಕೇಶ್ವರ ದೇವಸ್ಥಾನದ ಯುವ ನಾಯಕ ಹರೀಶ್‌ ಪೂಂಜಾ ಅವರ ತಾಯಿ ನಳಿನಿ ಎಸ್‌. ಪೂಂಜಾ ಹಾಗೂ ತಂಡದ ಸಹೋದರರಾದ ಅಕ್ಷಯ್‌ ಪಡಂಗಡಿ, ಅನಿಲ್‌ ಪಡಂಗಡಿ, ಕಿರಣ್‌ ಮಡಂತ್ಯಾರ್‌, ಸುದರ್ಶನ್‌ ಪೆರಾಡಿ, ಸತೀಶ್‌ ಪೆರಾಡಿ, ವಿಕ್ಯಾತ್‌ ಪೆರಾಡಿ, ಪ್ರಕಾಶ್‌ ಪೆರಾಡಿ, ಜಗದೀಶ್‌ ಪೆರಾಡಿ, ಸಂದೀಪ್‌ ಪೆರಾಡಿ, ವಿಜೇತ್‌ ಬೆಳುವಾಯಿ, ಶೃಂಗಾರ್‌ ಕೊಯ್ಯೂರು, ಚೇತನ್‌ ಪಡಂಗಡಿ, ನಿಕೇಶ್‌ ಅಂಡಿಂಜೆ, ಸಂಪತ್‌, ಸತೀಶ್‌, ವಿಜಯರಾಜ್‌,  ಯೋಗೀಶ್‌, ಕಿಶೋರ್‌ ಮೊದಲಾದವರ  ಉಪಸ್ಥಿತಿಯಲ್ಲಿ  ಹಸ್ತಾಂತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next