Advertisement

ಬಡ ಮಕ್ಕಳ ಶಿಕ್ಷಣಕ್ಕಾಗಿ ನೆರವು ನೀಡಿ

11:51 AM Aug 02, 2017 | |

ತಿ.ನರಸೀಪುರ: ಸರ್ಕಾರಿ ನೌಕರರ ಮಕ್ಕಳಿಗೆ ನೀಡುತ್ತಿರುವ ಪ್ರತಿಭಾ ಪುರಸ್ಕಾರವನ್ನು ಬಡವರ ಪ್ರತಿಭಾನ್ವಿತ ಮಕ್ಕಳಿಗೂ ವಿಸ್ತರಿಸಿ, ಪ್ರತಿಯೊಬ್ಬರು ವರ್ಷಕ್ಕೆ 5 ಸಾವಿರ ರೂಗಳನ್ನು ಬಡವರ ಮಕ್ಕಳ ಶಿಕ್ಷಣಕ್ಕಾಗಿ ನೆರವು ನೀಡಬೇಕೆಂದು ತಹಶೀಲ್ದಾರ್‌ ಬಸವರಾಜು ಚಿಗರಿ ಹೇಳಿದರು.

Advertisement

ಪಟ್ಟಣದ ತಾಲೂಕು ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಐಎಎಸ್‌ ಅಧಿಕಾರಿ ಬಿ.ಎಂ.ಸಂತೋಷ್‌ರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸಮುದಾಯ ಪರವಾದ ಚಿಂತನೆಗಳನ್ನು ಸರ್ಕಾರಿ ನೌಕರರು ಮೈಗೂ ಡಿಸಿಕೊಂಡು ಪ್ರತಿಭಾನ್ವಿತ ಬಡವರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.

ಕಾಲ ಬದಲಾದಂತೆ ಜನಜೀವನವೂ ಬದಲಾಗುತ್ತಿದೆ. ದೇಶದಲ್ಲಿ ಆಹಾರಕ್ಕೆ ಹಾಹಾಕಾರ ಇದ್ದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮದುವೆ ಸಮಾರಂಭಗಳಲ್ಲಿ ಕರೆಯದಿದ್ದರೂ ಊಟಕ್ಕೆ ಹೋಗುತ್ತಿದ್ದರು. ಆದರೆ ಈಗಿನ ಸನ್ನಿವೇಶದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ನೂರಾರು ಜನರನ್ನು ಆಹ್ವಾನಿಸಿ ಊಟ ಹಾಕುವ ಸಂಸ್ಕಾರ ಪ್ರತಿಯೊಬ್ಬರಲ್ಲೂ ಕಾಣುತ್ತಿದ್ದೇವೆ. ಸರ್ಕಾರಿ ನೌಕರರ ಸಂಘದ ಕಾರ್ಯ ಚಟುವಟಿಕೆಗಳಿಗೆ ಅಗತ್ಯ ಸಹಕಾರವನ್ನು ನೀಡುತ್ತೇನೆ ಎಂದು ತಿಳಿಸಿದರು.

ತಾಪಂ ಸದಸ್ಯ ಎಂ.ರಮೇಶ ಮಾತನಾಡಿ, ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸಾಮಾನ್ಯರಿಗಿಂತ ಆತ್ಮಸ್ಥೈರ್ಯ ಹೆಚ್ಚು ಇರಬೇಕು. ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸಲು ಹಾಗೂ ಚುನಾಯಿತ ಪ್ರತಿನಿಧಿಗಳ ಸಲಹೆ ಸೂಚನೆ ಪಡೆದು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಕಾರ್ಯದ ಒತ್ತಡ ಹೆಚ್ಚುವುದರಿಂದ ಆತ್ಮಸ್ಥೈರ್ಯದ ವೃದ್ಧಿಯ ಅಗತ್ಯವಿದೆ. ಕಳೆದು ಹೋದ ಜೀವವನ್ನು, ಒಳ್ಳೆಯ ವ್ಯಕ್ತಿತ್ವವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಸರಳ, ಸಜ್ಜನಿಕೆ ವ್ಯಕ್ತಿತ್ವದ ಅಧಿಕಾರಿಯಾಗಿ ತಹಶೀಲ್ದಾರ್‌ ಬಿ.ಶಂಕರಯ್ಯರ ಅಕಾಲಿಕ ಮರಣ ತಾಲೂಕು ಆಡಳಿತಕ್ಕೆ ತುಂಬಲಾರದ ನಷ್ಟ ಎಂದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯನ್ನೊಂದಿದ ತಾಲೂಕಿನ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಯುಪಿಎಸ್ಸಿ ಪರೀಕ್ಷೆಯಲ್ಲಿ 307 ರ್‍ಯಾಂಕ್‌ನಲ್ಲಿ ಉತ್ತೀರ್ಣರಾದ ಐಎಎಸ್‌ ಅಧಿಕಾರಿ ಬಿ.ಎಂ.ಸಂತೋಷ್‌ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವರ್ಗಾವಣೆಗೊಂಡ ಆಹಾರ ನಿರೀಕ್ಷಕ ಸುರೇಶ್‌, ಶಿಕ್ಷಕ ಸಚ್ಚಿತಾನಂದ ಹಾಗೂ ಆರೋಗ್ಯ ಇಲಾಖೆಯ ಅಂಬಿಕಾರನ್ನು ಸನ್ಮಾನಿಸಲಾಯಿತು.

Advertisement

ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಬಿಸಿಯೂಟ ಸಹಾಯಕ ನಿರ್ದೇಶಕ ಮಲ್ಲಿಕಾರ್ಜು, ಪಶುಪಾಲನೆ ಸಹಾಯಕ ನಿರ್ದೇಶಕ ಡಾ.ಚಿನ್ನಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಡಾ.ಎನ್‌.ಕೃಷ್ಣಮೂರ್ತಿ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಶಿಲ್ಪಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಉಪಾಧ್ಯಕ್ಷರಾದ ಎ.ಗಜೇಂದ್ರ, ಸುರೇಶ, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ,

-ಖಜಾಂಚಿ ಉಮೇಶ್‌ಕುಮಾರ್‌, ರಾಜ್ಯ ಪರಿಷತ್‌ ಸದಸ್ಯ ಜವರಯ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಸೋಸಲೆ ನಾಗೇಶ, ಕಟ್ಟಡ ಸಮಿತಿ ಕಾರ್ಯದರ್ಶಿ ಶಂಕರ್‌, ನಿವೇಶನ ಸಮಿತಿ ಕಾರ್ಯದರ್ಶಿ ಡಿ.ಪ್ರಕಾಶ್‌, ನಿರ್ದೇಶಕರಾದ ಹೆಚ್‌.ಡಿ.ಮಾದಪ್ಪ, ಬನ್ನೂರು ಪುಟ್ಟರಾಜು, ಪ್ರಸಾದ್‌, ವೆಂಕಟಶೆಟ್ಟಿ, ನಾಗ, ನಾಗರಾಜು, ಮಂಟೇಸ್ವಾಮಿ, ಕೆಂಡಗಣ್ಣಸ್ವಾಮಿ, ಮುಖಂಡ ಯರಗನಹಳ್ಳಿ ರಂಗರಾಮು ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next