Advertisement

ದಿನೇಶ್ ಹೆಗ್ಡೆ ಬಳಿ 9.78 ಕೋಟಿ ರೂ ಆಸ್ತಿ; ವೇದವ್ಯಾಸ ಕಾಮತ್‌ ಬಳಿ 12 ಕೋಟಿ ರೂ ಆಸ್ತಿ

11:09 AM Apr 18, 2023 | Team Udayavani |

ಕುಂದಾಪುರ/ ಮಂಗಳೂರು: ಕುಂದಾಪುರ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ತನ್ನ ಹೆಸರಿನಲ್ಲಿ 8.38 ಕೋ.ರೂ. ಗಳ ಚರಾಸ್ತಿ,1.4 ಕೋ.ರೂ. ಸ್ಥಿರಾಸ್ತಿ, 1.1 ಕೋ.ರೂ. ಹಣ ಬರಲು ಬಾಕಿ ಇದೆ ಎಂದು ತಿಳಿಸಿದ್ದಾರೆ. ಪತ್ನಿ ದೀಪಿಕಾ ಹೆಗ್ಡೆ ಹೆಸರಿನಲ್ಲಿ 1.4 ಕೋ.ರೂ. ಚರಾಸ್ತಿ, 56 ಲಕ್ಷ ರೂ.ಗಳ ಸ್ಥಿರಾಸ್ತಿ ಇದೆ. ಪುತ್ರಿ ತನ್ವಿ ಡಿ. ಹೆಗ್ಡೆ ಮತ್ತು ಪುತ್ರ ತನಿಶ್‌ ಡಿ. ಹೆಗ್ಡೆ ಬಳಿ ಹಣದ ವ್ಯವಹಾರ, ಆಸ್ತಿ ಇಲ್ಲ.

Advertisement

ದಿನೇಶ್‌ ಹೆಗ್ಡೆ ಕೈಯಲ್ಲಿ 5.2 ಲಕ್ಷ ರೂ. ನಗದು, 3.9 ಕೋ.ರೂ. ಠೇವಣಿ, 1.27 ಕೋ. ರೂ.ಗಳ ಮ್ಯೂಚುವಲ್‌ ಫ‌ಂಡ್‌, ಷೇರು ಹೂಡಿಕೆ, 20 ಲಕ್ಷ ರೂ.ಗಳ ಇನ್ನೊವಾ ಹಾಗೂ 21 ಲಕ್ಷ ರೂ. ಗಳ ಕಿಯಾ ಕಾರು, 3 ಟಿಪ್ಪರ್‌, 3 ಹಿಟಾಚಿ, 1 ಪಿಕಪ್‌, 1 ವೈಬ್ರೇಟರ್‌, 1 ಪೇವರ್‌ ಫಿನಿಶರ್‌ ವಾಹನ, ಟಾಟಾ ಮ್ಯಾಜಿಕ್‌, ಪ್ಲಾಂಟ್‌ ಮೆಶಿನರಿ, ಜೆಸಿಬಿ ಇದೆ. ಒಟ್ಟಿಗೆ 8.3 ಕೋ.ರೂ. ಚರಾಸ್ತಿ ಇದೆ. ಪತ್ನಿ ಬಳಿ 17 ಲಕ್ಷ ರೂ.ಗಳ 1.2 ಕೆ.ಜಿ. ಚಿನ್ನ, ರಿಟ್ಜ್ ಕಾರು, ಟ್ರಾಕ್ಟರ್‌, ಬೈಕ್‌, ವೇ ಬ್ರಿಡ್ಜ್ ಮತ್ತಿತರ ಯಂತ್ರೋಪಕರಣ ಎಂದು ಒಟ್ಟು 1.43 ಕೋ.ರೂ.ಗಳ ಆಸ್ತಿ ಇದೆ. ಪತ್ನಿ ಬಳಿ 26 ಲಕ್ಷ ರೂ.ಗಳ ಸ್ಥಿರಾಸ್ತಿ, 8.5 ಲಕ್ಷ ರೂ.ಗಳ ಕೃಷಿಯೇತರ ಸ್ಥಿರಾಸ್ತಿ, ಕೋಟೇಶ್ವರದಲ್ಲಿ ಫ್ಲಾಟ್‌ ಸೇರಿದಂತೆ 68.5 ಲಕ್ಷ ರೂ.ಗಳ ಆಸ್ತಿ, ದಿನೇಶ್‌ ಹೆಗ್ಡೆ ಬಳಿ ಪಿತ್ರಾರ್ಜಿತವೂ ಸೇರಿ 1.45 ಕೋ.ರೂ.ಗಳ ಸ್ಥಿರಾಸ್ತಿ, 55 ಲಕ್ಷ ರೂ. ಗಳ ಕೃಷಿಯೇತರ ಸ್ಥಿರಾಸ್ತಿ, ಮೊಳಹಳ್ಳಿಯಲ್ಲಿ ಮನೆ ಸೇರಿದಂತೆ ಒಟ್ಟು 2.18 ಕೋ.ರೂ.ಗಳ ಆಸ್ತಿ ಇದೆ.  ಪತ್ನಿಗೆ 29 ಲಕ್ಷ ರೂ. ಸಾಲ, ದಿನೇಶ್‌ ಹೆಗ್ಡೆಗೆ 4.97 ಕೋ.ರೂ. ಸಾಲ ಇದೆ.

ವೇದವ್ಯಾಸ ಕಾಮತ್‌

ವೇದವ್ಯಾಸ್‌ ಕಾಮತ್‌ ಅವರ ಕೈಯಲ್ಲಿ 3 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ, ಉಳಿತಾಯ ಖಾತೆ, ಹೊರ ಸಾಲ ನೀಡಿಕೆ, ಚಿನ್ನಾಭರಣ, ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಸೇರಿದಂತೆ ಒಟ್ಟು 12,78,23,822.67 ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಪತ್ನಿ ವೃಂದಾ ಕಾಮತ್‌ ಕೈಯಲ್ಲಿ 1.50 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ ಠೇವಣಿ ಸೇರಿದಂತೆ ಒಟ್ಟು 6,22,45,078.04 ರೂ. ಚರಾಸ್ತಿ ಇದೆ. ವೇದವ್ಯಾಸ ಕಾಮತ್‌ ಹೆಸರಿನಲ್ಲಿ 11,53,39,000 ರೂ. ಮೌಲ್ಯದ ಹಾಗೂ ಪತ್ನಿ ಹೆಸರಿನಲ್ಲಿ 8,82,12,500 ರೂ. ಮೌಲ್ಯದ ಸ್ಥಿರಾಸ್ತಿ ಇದೆ. 4,92,67,504 ರೂ. ಸಾಲವನ್ನು ವೇದವ್ಯಾಸ ಹೊಂದಿದ್ದು, ಪತ್ನಿ 91,77,143 ರೂ. ಸಾಲವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

Advertisement

ವೇದವ್ಯಾಸ ಕಾಮತ್‌ ತನ್ನ ಬಳಿ 11.47 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಪತ್ನಿ ಬಳಿ 74.55 ಲಕ್ಷ ರೂ. ಮೌಲ್ಯದ 1.30 ಕೆಜಿ ಚಿನ್ನ ಹಾಗೂ 2.44 ಲಕ್ಷ ರೂ. ಮೌಲ್ಯದ ಬೆಳ್ಳಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ಕಾಮತ್‌ ಅವರು ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ ಎಂದು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next