Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಾಂಕ ಘೋಷಿಸಲಿದ್ದಾರೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
Related Articles
ಚಳಿಗಾಲ ಅಧಿವೇಶನ ವೇಳೆ ಪ್ರತೀ ವರ್ಷ ವಸತಿಗಾಗಿ ಸುಮಾರು 6 ಕೋಟಿ ರೂ. ವೆಚ್ಚವಾಗುತ್ತಿದೆ. ಈ ವೆಚ್ಚವನ್ನು ತಗ್ಗಿಸಲು ಶಾಸಕ ಭವನ ನಿರ್ಮಿಸುವುದು ಅಗತ್ಯವಿದೆ. ಹೀಗಾಗಿ ಶಾಸಕರ ಭವನ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
Advertisement
ಬೆಂಗಳೂರಿನ ವಿಧಾನಸೌಧ ಮತ್ತು ಬೆಳಗಾವಿಯ ಸುವರ್ಣ ವಿಧಾನಸೌಧದ ಗೋಪುರಗಳ ಮೇಲೆ ಇರುವ ರಾಷ್ಟ್ರ ಲಾಂಛನದಡಿ “ಸತ್ಯಮೇವ ಜಯತೆ’ ಎಂದು ಬರೆದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಬರೆಸಲಾಗುವುದು.– ಯು.ಟಿ. ಖಾದರ್, ವಿಧಾನ ಸಭಾಧ್ಯಕ್ಷ