ಅಮೃತಸರ/ಪಣಜಿ: ಪಂಚರಾಜ್ಯಗಳ ಪೈಕಿ ಗೋವಾ ಮತ್ತು ಪಂಜಾಬ್‌ನಲ್ಲಿ ಇಂದು ಶನಿವಾರ ಮೊದಲ ಹಂತದಲ್ಲಿ ಶಾಂತಿಯುತ ಮತದಾನ ನಡೆಯುತ್ತಿದ್ದು, 3 ಗಂಟೆಯ ವೇಳೆಗೆ ಪಂಜಾಬ್‌ನ 117 ಕ್ಷೇತ್ರಗಳಲ್ಲಿ 55%, ಗೋವಾದ 40 ಕ್ಷೇತ್ರಗಳಲ್ಲಿ ಭರ್ಜರಿ 67 % ಮತದಾನವಾದ ಬಗ್ಗೆ ವರದಿಯಾಗಿದೆ.
ಪಣಜಿಯಲ್ಲಿ ರಕ್ಷಣಾ ಸಚಿವ ಮನೋಹರ್ ±ರ್ರಿಕರ್ ಅವರು ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತದಾನ ಮಾಡಿ ಹೊರ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಬಾರಿ ರಾಜ್ಯದಲ್ಲಿ ಚತುಷ್ಕೋನ ಸ್ಪರ್ಧೆ ಇದೆ ಆದರೆ 3 ಕೋನಗಳು ಲೆಕ್ಕಕ್ಕಿಲ್ಲ ಎಂದರು. ಬಿಜೆಪಿ 3/2 ರಷ್ಟು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಗೋವಾದಲ್ಲಿ 11 ಲಕ್ಷಕ್ಕೂ ಅಧಿಕ ಮತದಾರರಿದ್ದು, 40 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಜರುಗುತ್ತಿದೆ. ಬಿಜೆಪಿಯ 37, ಕಾಂಗ್ರೆಸ್‌ನ 38 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಿಗೆ ಭರ್ಜರಿ ಪೈಪೋಟಿ ನೀಡಲು ಆಪ್ ಎಲ್ಲ 40 ಕ್ಷೇತ್ರಗಳಲ್ಲೂ ಹುರಿಯಾಳುಗಳನ್ನು ಕಣಕ್ಕಿಳಿಸಿದೆ.
1,642 ಬೂತ್‌ಗಳಲ್ಲಿ ಶನಿವಾರ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ಜರುಗುತ್ತಿದೆ. ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಪ್ರಮುಖ ಬೂತ್‌ಗಳಿಗೆ ನೇಮಿಸಲಾಗಿದ್ದು, ರಾಜ್ಯ ಪೊಲೀಸರೊಂದಿಗೆ ಪ್ಯಾರಾಮಿಲಿಟರಿ ಪಡೆ ಬಿಗಿಭದ್ರತೆ ಆಯೋಜಿಸಿದೆ.
ಪಂಜಾಬ್ ನಲ್ಲಿ 1.98 ಕೋಟಿ ಮತದಾರರು 117 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯವನ್ನು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ದಾಖಲಿಸಲಿದ್ದಾರೆ. 22,615 ಕೇಂದ್ರಗಳಲ್ಲಿ ಮತದಾನ ನಡೆಯುತ್ತಿದ್ದು. 200 ಪ್ಯಾರಾಮಿಲಿಟರಿ ಪಡೆಗಳು ರಾಜ್ಯ ಪೊಲೀಸರೊಂದಿಗೆ ಭದ್ರತೆಗೆ ಹೆಗಲು ಕೊಡಲಿವೆ. ಪ್ರಸಕ್ತ ಸಾಲಿನಲ್ಲಿ ರಕ್ಷಣಾ ಇಲಾಖೆ ಸಿಬ್ಬಂದಿಗೆ ಅಂಚೆ ಮತದಾನ ಬದಲಾಗಿ ಆರಂಭಿಸಲಾಗುವ ಇಧಿಮತ ವ್ಯವಸ್ಥೆ ಶನಿವಾರ ಗೋವಾ, ಪಂಜಾಬ್‌ಗಳಲ್ಲಿ ಜಾರಿಗೆ ಬಂದಿದೆ.