Advertisement

ಸ್ಟಾರ್‌ ಪ್ರಚಾರಕಿಯಾದ್ರೂ ಬಾರದ ರಮ್ಯಾ

06:40 AM May 03, 2018 | |

ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆ ನಟಿ ರಮ್ಯಾ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಟಾರ್‌ ಪ್ರಚಾರಕಿಯಾದರೂ ರಾಜ್ಯದ ಕಡೆಗೆ ಮುಖ ಮಾಡದಿರುವುದು ಪಕ್ಷದ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Advertisement

ರಮ್ಯಾ ನಡವಳಿಕೆಯ ಬಗ್ಗೆ ಪಕ್ಷದ ಹಿರಿಯ ನಾಯಕರು ಮುನಿಸಿ ಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಚುನಾವಣೆ ಪ್ರಚಾರ ಭರದಿಂದ ಸಾಗಿದ್ದರೂ, ಪಕ್ಷದ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದ್ದರೂ ಪ್ರಚಾರಕ್ಕೆ ಬಾರದೇ ರಮ್ಯಾ ದೆಹಲಿಯಲ್ಲಿಯೇ ಕುಳಿತಿರುವುದಕ್ಕೆ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಹೈಕಮಾಂಡ್‌ ಮಟ್ಟದಲ್ಲಿ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿರುವ ರಮ್ಯಾ, ರಾಜ್ಯದ ಬಗ್ಗೆ ಆಸಕ್ತಿ ತೋರದೇ ಸಾಮಾಜಿಕ ಜಾಲ
ತಾಣದ ಮೂಲಕ ತಮ್ಮ ಅಸ್ತಿತ್ವ ತೋರಿಸು ತ್ತಿರುವುದು ಸ್ಥಳೀಯ ನಾಯಕರ ಮುನಿಸಿಗೆ ಕಾರಣವಾಗಿದೆ. ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ನಾಯಕತ್ವ ಇಲ್ಲದೇ ಅಭ್ಯರ್ಥಿಗಳು ಅನಾಥ ಭಾವ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. 

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ  ಪಕ್ಷ ತೊರೆದ ಮೇಲೆ ಮಂಡ್ಯದಲ್ಲಿ ಅಂಬರೀಶ್‌ ವಿರೋಧಿ ಬಣ ರಮ್ಯಾರನ್ನೇ ತಮ್ಮ ನಾಯಕಿ ಎಂದು ನಂಬಿಕೊಂಡಿತ್ತು. ಅಂಬರೀಶ್‌ ಅನಾ ರೋಗ್ಯದ ಕಾರಣ ನೀಡಿ ಯಾವುದೇ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿಲ್ಲ. ಆದರೆ, ಮಂಡ್ಯದ ಮಾಜಿ ಸಂಸದೆಯಾಗಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬಾರದಿರುವುದು ಸ್ಥಳೀಯ ಕಾರ್ಯಕರ್ತರ ಬೇಸರಕ್ಕೆ ಕಾರಣ ವಾಗಿದೆ ಎನ್ನಲಾಗಿದೆ. ಅಲ್ಲದೇ ರಾಜ್ಯದ ಇತರ ಕ್ಷೇತ್ರಗಳಲ್ಲಿಯೂ ರಮ್ಯಾರನ್ನು ಸ್ಟಾರ್‌ ಪ್ರಚಾರಕಿ ಯಾಗಿ ಬಳಸಿಕೊಳ್ಳಲು ಪಕ್ಷ ಆಲೋಚನೆ ಮಾಡಿತ್ತಾದರೂ, ಅವರು ರಾಜ್ಯದ ಕಡೆಗೆ ಮುಖ ಮಾಡದಿರುವುದು ಅನೇಕ ಅಭ್ಯರ್ಥಿ ಗಳ ಅಸಮಾಧಾನಕ್ಕೆ  ಕಾರಣವಾಗಿದೆ.

ಒಂದು ಮೂಲದ ಪ್ರಕಾರ ರಮ್ಯಾ ಪ್ರಚಾರಕ್ಕೆ ಬಂದರೆ, ಅನಗತ್ಯ ಗೊಂದಲ ಸೃಷ್ಠಿಯಾಗುತ್ತದೆ. ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೆ ಅನುಕೂಲ ಮಾಡುವುದಕ್ಕಿಂತ ಹೆಚ್ಚಾಗಿ ನಷ್ಟವೇ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್‌ ಸೇರಿದಂತೆ ಹಿರಿಯ ನಾಯಕರೇ ಅವರನ್ನು ಪ್ರಚಾರದಿಂದ ದೂರ ಇಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next