Advertisement

R. Ashok: ಆಸ್ಪತ್ರೆಗಳಿಗೆ ನೀರು ಕೊಡದಷ್ಟು ಸರ್ಕಾರ ಪಾಪರ್‌; ಅಶೋಕ್‌

08:50 PM Jun 20, 2024 | Team Udayavani |

ಕಲಬುರಗಿ: ರಾಜ್ಯದ ಆಸ್ಪತ್ರೆಗಳಲ್ಲಿ ಶುದ್ಧ ನೀರಿಲ್ಲ. ಮಳೆಗಾಲದಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ ಎಂದರೆ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ತರಾಟೆ ತೆಗೆದುಕೊಂಡರು.

Advertisement

ನಗರದ ಜಯದೇವ ಮತ್ತು ಜಿಮ್ಸ್‌ ಆಸ್ಪತ್ರೆಗಳಿಗೆ ಗುರುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ನೀರಿಲ್ಲದೆ ಇರುವುದರಿಂದ ಮೂರು ದಿನಗಳ ಕಾಲ ಆಪರೇಷನ್‌ ನಿಲ್ಲಿಸಲಾಗಿದ್ದು, ರೋಗಿಗಳಿಗೆ ತೊಂದರೆ ಆಗಿದೆ. ಆಸ್ಪತ್ರೆಗಳಿಗೆ ನೀರು ಕೊಡದಷ್ಟು ಪಾಪರ್‌ ಸರ್ಕಾರ ಇದು ಎಂದು ದೂರಿದರು.

ಮಳೆಗಾಲದಲ್ಲಿ ರಾಡಿ ನೀರು ಬರುತ್ತಿದ್ದರೆ ಕಾರ್ಪೋರೇಷನ್‌ ಏನು ಮಾಡುತ್ತಿದೆ?, ಪಾಲಿಕೆ ಅಧಿಕಾರಿಗಳಿಗೆ ಕಾಮನ್‌ಸೆನ್ಸ್‌ ಇಲ್ಲವಾ?, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾರದಷ್ಟು ನಿರ್ಲಕ್ಷé ತೋರಿದರೆ ಹೇಗೆ? ಎಂದು ಪ್ರಶ್ನಿಸಿದರು.

ಆಸ್ಪತ್ರೆಗಳಲ್ಲಿ ನೀರಿಲ್ಲದೆ ಆಪರೇಷನ್‌ ಸೇರಿದಂತೆ ಇತರೆ ಚಿಕಿತ್ಸಾ ಸೌಲಭ್ಯ ನೀಡಲು ವಿಫಲವಾಗಿರುವ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಶ್ನಿಸುವೆ. ಪಾಲಿಕೆ ಕಮಿಷನರ್‌ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಧಾನಸಭೆಯಲ್ಲಿ ಪ್ರಶ್ನಿಸಿ ಸರ್ಕಾರವನ್ನು ಚರ್ಚೆಗೆ ಆಹ್ವಾನಿಸುತ್ತೇವೆ. ಕೂಡಲೇ ಘಟನೆ ಸಂಬಂಧ ತಂಡವನ್ನು ಕಳುಹಿಸಿ ವಿಚಾರಣೆ ಮಾಡಿ ವರದಿ ಕೊಡುವಂತೆ ಸೂಚಿಸಲಾಗುವುದು ಎಂದರು. ಎಂಎಲ್‌ಸಿಗಳಾದ ಶಶೀಲ್‌ ನಮೋಶಿ, ಬಿ.ಜಿ.ಪಾಟೀಲ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next