Advertisement
ಟಿಎಂಸಿ ಗೋವಾ ಉಸ್ತುವಾರಿ ಮಹುವಾ ಮೊಹಿತ್ರಾ ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ- “ಗೃಹಲಕ್ಷ್ಮಿ” ಎಂಬ ಟಿಎಂಸಿ ಪಕ್ಷದ ಮೊದಲ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ರಾಜ್ಯದಲ್ಲಿ ಪ್ರತಿ ಗೃಹಿಣಿಯರಿಗೆ ಮಾಸಿಕವಾಗಿ 5,000 ರೂ ಭತ್ಯೆ ನೀಡಲಾಗುವುದು. 3.5 ಲಕ್ಷ ಗೃಹಿಣಿಯರು ಈ ಯೋಜನೆಯ ಅಡಿಯಲ್ಲಿ ಲಾಭ ಪಡೆಯಲಿದ್ದಾರೆ. ಬಿಜೆಪಿ ಸರ್ಕಾರದ ಗೃಹ ಆಧಾರ ಯೋಜನೆಯ ಅಡಿಯಲ್ಲಿ ಕಡ್ಡಾಯವಾಗಿರುವ ಗರಿಷ್ಠ ಆದಾಯದ ಮಿತಿಯನ್ನು ತೆಗೆದುಹಾಕಲಾಗುವುದು. ಬಿಜೆಪಿ ನೇತೃತ್ವದ ಸರ್ಕಾರವು ಗೃಹ ಆಧಾರ ಯೋಜನೆಯ ಅಡಿಯಲ್ಲಿ ಗೃಹಿಣಿಯರಿಗೆ ಸದ್ಯ 1,500 ರೂಗಳನ್ನು ನೀಡುತ್ತಿದೆ. ಆದಾಯದ ಮಿತಿಯಿಂದಾಗಿ ಈ ಯೋಜನೆಯು 1.5 ಲಕ್ಷ ಜನ ಮಹಿಳೆಯರಿಗೆ ಮಾತ್ರ ಲಭಿಸುತ್ತಿದೆ ಎಂದು ಮೊಹಿತ್ರಾ ನುಡಿದರು.
Advertisement
ಗೋವಾ: ಟಿಎಂಸಿಯ ಮೊದಲ ಚುನಾವಣೆ ಪ್ರಣಾಳಿಕೆ ಬಿಡುಗಡೆ
05:21 PM Dec 11, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.