Advertisement

ಕೈಫ್ ಟ್ವೀಟ್‌ಗೆ ಮೋದಿ ಧನ್ಯವಾದ

09:31 AM Mar 13, 2017 | |

ನವದೆಹಲಿ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಕಷ್ಟು ಸೆಲೆಬ್ರಿಟಿಗಳು ಶುಭಕೋರಿದ್ದಾರೆ. 

Advertisement

ಆದರೆ ಮೋದಿ ಪ್ರತಿಕ್ರಿಯಿಸಿರುವುದು ಕೆಲವೇ ಕೆಲವರಿಗೆ. ಅಂಥ ಕೆಲವರಲ್ಲಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಒಬ್ಬರು. “”ಚುನಾವಣೆ ಗೆದ್ದ ನರೇಂದ್ರ ಮೋದಿಜಿ ಹಾಗೂ ಬಿಜೆಪಿಗೆ ಅಭಿನಂದನೆಗಳು. ಉತ್ತರ ಪ್ರದೇಶದ ಗೆಲುವು ಅಮೋಘ,” ಎಂದು ಕೈಫ್ ಟ್ವೀಟಿಸಿದ್ದರು. ಅದಕ್ಕೆ ಉತ್ತರವಾಗಿ,””ಧನ್ಯವಾದಗಳು. ಚುನಾವಣೆಯಲ್ಲಿ ಸಿಕ್ಕ ಬೆಂಬಲ ಮತ್ತು ಮತದಾನದ ಪ್ರಮಾಣ ಅದ್ಭುತ,” ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next