ಸೋಮವಾರ ಮೂರು ಮಸೂದೆಗಳ ಚರ್ಚೆಗೆ ಬಿಜೆಪಿ ಈಗಾಗಲೇ ಒಪ್ಪಿಗೆ ನೀಡಿದೆ. ಪ್ರತಿ ದಿನ ಮೂರು ಮಸೂದೆಗಳನ್ನು ಮಂಡಿಸುತ್ತೇವೆ ಎಂದು ಆಡಳಿತ ಪಕ್ಷ ಕಲಾಪ ಸಲಹಾ ಮಂಡಳಿ ಸಭೆಯಲ್ಲಿ ತಿಳಿಸಿದೆ. ಆದರೆ ಉತ್ತರ ಕರ್ನಾಟಕದ ಚರ್ಚೆ ಎಂದಿನಿಂದ ಎಂಬ ಸ್ಪಷ್ಟತೆ ಇಲ್ಲ.
Advertisement
ಬಿಜೆಪಿಯಿಂದ ಮೂರು ಅಸ್ತ್ರಈ ಮಧ್ಯೆ ಬಿಜೆಪಿ ಮೂರು ಪ್ರಬಲ ಅಸ್ತ್ರಗಳನ್ನು ಪ್ರಯೋಗಿಸಲು ನಿರ್ಧರಿಸಿದೆ. ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣ ಹಿಂಪಡೆದ ವಿಚಾರವನ್ನು ಮಂಗಳ ವಾರ ಪ್ರಸ್ತಾವಿಸಲು ಬಿಜೆಪಿ ಮುಂದಾಗಿದೆ.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಿಂದ ಸುಮಾರು 50 ಸಾವಿರ ಫಲಾನುಭವಿಗಳಿಗೆ ಹಿಂದಿನ ಬಿಜೆಪಿ ಸರಕಾರದಲ್ಲಿ ನೀಡಿದ್ದ ವಿವಿಧ ಸೌಲಭ್ಯವನ್ನು ಸರಕಾರ ತಡೆಹಿಡಿದಿರುವುದು ಮತ್ತೂಂದು ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಜೆಪಿಯ ಹಿಂದುಳಿದ ವರ್ಗದ ಶಾಸಕರು ನಿಯಮ 69 ರಡಿ ಚರ್ಚೆಗೆ ಅವಕಾಶ ಕೋರಿ ಸ್ಪೀಕರ್‌ಗೆ ನೋಟಿಸ್ ನೀಡಿದ್ದಾರೆ. ಗಂಗಾ ಕಲ್ಯಾಣ, ಹಿಂದುಳಿದ ವರ್ಗದ ಯುವಕರಿಗೆ ನೀಡಿದ್ದ ಸೌಲ ಸೌಲಭ್ಯ ಸಹಿತ ಸುಮಾರು 50 ಸಾವಿರ ಫಲಾನುಭವಿಗಳ ಆಯ್ಕೆಯನ್ನು ರಾಜ್ಯ ಸರಕಾರ ವಿನಾಕಾರಣ ತಡೆ ಹಿಡಿದಿದೆ ಎಂದು ಬಿಜೆಪಿ ಈ ಹಿಂದೆ ಆರೋಪಿಸಿತ್ತು.