Advertisement

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

09:15 PM Nov 23, 2024 | Team Udayavani |

ಹೊಸದಿಲ್ಲಿ: ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಗಳ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಮತ್ತು ಅದರ ಕೆಲವು ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳು ಹಿನ್ನಡೆ ಅನುಭವಿಸಿವೆ.

Advertisement

14 ರಾಜ್ಯಗಳ 48 ವಿಧಾನಸಭಾ ಸ್ಥಾನಗಳಲ್ಲಿ ಎನ್‌ಡಿಎ 28 ಸ್ಥಾನಗಳನ್ನು ಗೆದ್ದರೆ, ಇಂಡಿಯಾ ಮೈತ್ರಿಕೂಟ 20 ಸ್ಥಾನಗಳನ್ನು ಪಡೆದಿದೆ. ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ(ನಾಂದೇಡ್) ಮತ್ತು ಕಾಂಗ್ರೆಸ್ (ವಯನಾಡ್) ತಲಾ ಒಂದೊಂದು ಸ್ಥಾನ ಗೆದ್ದುಕೊಂಡಿವೆ. ಸೋಲಿನ ಬಳಿಕ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳ ನಾಯಕರು ಪರಸ್ಪರ ವಿರುದ್ಧ ಕಿಡಿಕಾರಿಕೊಂಡಿದ್ದಾರೆ.

ರಾಜ್ಯವಾರು ಫಲಿತಾಂಶ
ಅಸ್ಸಾಂ – ಬಿಜೆಪಿ: 3; ಯುಪಿಎಲ್: 1; ಎಜಿಪಿ: 1
ಬಿಹಾರ – ಬಿಜೆಪಿ: 2; ಹಿಂದುಸ್ಥಾನ್ ಅವಾಮ್ ಮೋರ್ಚಾ : 1; ಜೆಡಿ(ಯು): 1
ಛತ್ತೀಸ್‌ಗಢ – ಬಿಜೆಪಿ: 1
ಗುಜರಾತ್ – ಬಿಜೆಪಿ: 1
ಕರ್ನಾಟಕ – ಕಾಂಗ್ರೆಸ್: 3
ಕೇರಳ – ಕಾಂಗ್ರೆಸ್: 1; ಸಿಪಿಐ(ಎಂ): 1
ಮಧ್ಯಪ್ರದೇಶ – ಬಿಜೆಪಿ: 1; ಕಾಂಗ್ರೆಸ್: 1
ಮೇಘಾಲಯ – ಎನ್‌ಪಿಪಿ 1
ಪಂಜಾಬ್ – ಆಮ್ ಆದ್ಮಿ ಪಕ್ಷ 3; ಕಾಂಗ್ರೆಸ್: 1
ರಾಜಸ್ಥಾನ – ಬಿಜೆಪಿ: 5; ಕಾಂಗ್ರೆಸ್: 1; BAP: 1
ಸಿಕ್ಕಿಂ – SKM: 2
ಉತ್ತರ ಪ್ರದೇಶ: ಬಿಜೆಪಿ: 6 ಸಮಾಜವಾದಿ ಪಕ್ಷ: 2; ಆರ್‌ಎಲ್‌ಡಿ: 1
ಉತ್ತರಾಖಂಡ: ಬಿಜೆಪಿ: 1
ಪಶ್ಚಿಮ ಬಂಗಾಳ: ಟಿಎಂಸಿ 6

Advertisement

Udayavani is now on Telegram. Click here to join our channel and stay updated with the latest news.

Next