Advertisement

Puttur ಮಹಿಳೆಯಿಂದ ಹಲ್ಲೆ: ನಾಲ್ವರಿಂದ ದೂರು

11:32 PM Aug 23, 2024 | Team Udayavani |

ಪುತ್ತೂರು : ಮೊಸರುಕುಡಿಕೆ ಉತ್ಸವದ ಸಿದ್ಧತೆಯಲ್ಲಿ ತೊಡಗಿದ್ದ ಹಿಂದೂ ಕಾರ್ಯಕರ್ತರಿಗೆ ಮುಸ್ಲಿಂ ಮಹಿಳೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

Advertisement

ಆ. 22ರ ರಾತ್ರಿ ಪುತ್ತೂರಿನ ಕೋರ್ಟ್‌ ರಸ್ತೆಯಲ್ಲಿ ಘಟನೆ ನಡೆದಿದೆ. ಬೆಟ್ಟಂಪಾಡಿ ಮೂಲದ ನಾಲ್ವರು ಪುತ್ತೂರು ಮೊಸರುಕುಡಿಕೆ ಉತ್ಸವಕ್ಕೆ ಮಡಿಕೆಯನ್ನು ತಂದು ಪುತ್ತೂರು ಕಾರ್ಯಾಲಯದಲ್ಲಿ ಇರಿಸಿ ಕೋರ್ಟು ರಸ್ತೆ ಮೂಲಕ ಕಾರಿನಲ್ಲಿ ತೆರಳಿದ್ದರು. ಇದೆ ವೇಳೆ ವಿರುದ್ದ ದಿಕ್ಕಿನಿಂದ ಕಾರಿಗೆ ಎದುರಾಗಿ ಆಟೋ ರಿಕ್ಷಾವೊಂದು ಬಂದಿದೆ.

ಕೋರ್ಟ್‌ ರಸ್ತೆ ಏಕಮುಖ ರಸ್ತೆಯಾಗಿದ್ದು, ಹೀಗಾಗಿ ಕಾರಿನಲ್ಲಿದ್ದವರು ಆಟೋ ರಿಕ್ಷಾದಲ್ಲಿ ಬರುತ್ತಿದ್ದವರನ್ನು ವಿಚಾರಿಸಿದ್ದು ಇದೇ ವೇಳೆ ಅದೇ ರಸ್ತೆ ಪಕ್ಕದ ಅಂಗಡಿಯಿಂದ ಹೊರ ಬಂದ ಮಹಿಳೆ ಕಾರಿನಲ್ಲಿದ್ದ ಓರ್ವನಿಗೆ ಹಲ್ಲೆ ನಡೆಸಿ ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next