Advertisement

ಹುತಾತ್ಮರಿಗೆ ಅಶ್ರುತರ್ಪಣ

06:18 AM Feb 17, 2019 | |

ದಾವಣಗೆರೆ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರು ಮಾಡಿರುವ ದಾಳಿ ಖಂಡಿಸಿ ನಗರದ ಜಿಲ್ಲಾ ವಕೀಲರ ಸಭಾಭವನದಲ್ಲಿ ಶನಿವಾರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

Advertisement

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌ ಮಾತನಾಡಿ, ಕಾಶ್ಮೀರದಲ್ಲಿ ಭಾರತೀಯ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ನಡೆಸಿರುವ ದಾಳಿ ಅತ್ಯಂತ ಖಂಡನೀಯ. ಈ ಕೂಡಲೇ ಉಗ್ರರನ್ನು ಕಾನೂನಿನ ವ್ಯಾಪ್ತಿಯಲ್ಲಿ ತನಿಖೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕೆಂದು
ಆಗ್ರಹಿಸಿದರು.

ನಮ್ಮ ರಾಜಕೀಯ ಮುಖಂಡರು ಕೆಲವೊಂದು ಸಭೆಗಳಲ್ಲಿ ಪಾಕಿಸ್ತಾನ ಜಿಂದಾಬಾದ್‌, ಹಿಂದೂಸ್ತಾನ್‌ ಮುರ್ದಾಬಾದ್‌ ಎಂಬ ಘೋಷಣೆಗಳು ಕೇಳಿ ಬಂದರೂ ಕೇಳದವರಂತೆ ಸುಮ್ಮನಿರುವುದು ನಿಜಕ್ಕೂ ಶೋಚನೀಯ ಎಂದು ವಿಷಾದ ವ್ಯಕ್ತಪಡಿಸಿದರು.

ಭೂಪಾಲ್‌ನಲ್ಲಿ ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡಿದ ರಾಜಕೀಯ ಮುಖಂಡರೊಬ್ಬರನ್ನು ಒಳಗೊಂಡಂತೆ 11 ಜನರನ್ನು ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ನೀಡಿದ್ದ ಮಾನ್ಯತೆ ಹಿಂಪಡೆದು, ಅಟ್ಟಹಾಸ ಮೆರೆದ ಉಗ್ರರನ್ನು ಮಟ್ಟಹಾಕಲು ಸೈನ್ಯಕ್ಕೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿರುವುದನ್ನು ಒಕ್ಕೋರಲಿನಿಂದ ಸ್ವಾಗತಿಸಿದರು.

ನಂತರ ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅತಾವುಲ್ಲಾ ಖಾನ್‌, ಎಂ.ಎಂ. ಖೀಲೇದಾರ್‌, ಗುಮ್ಮನೂರು ಮಲ್ಲಿಕಾರ್ಜುನ್‌ ಮಾತನಾಡಿದರು. ಉಪಾಧ್ಯಕ್ಷ ಎಚ್‌. ದಿವಾಕರ್‌, ಕಾರ್ಯದರ್ಶಿ ಬಿ.ಎಸ್‌. ಲಿಂಗರಾಜ್‌, ಬಸವರಾಜ್‌, ಗಣೇಶ್‌ ಕುಮಾರ್‌, ಅನಿತಾ, ಮಂಜುಳಾ, ಅನ್ನಪೂರ್ಣಮ್ಮ ಇತರರು ಇದ್ದರು.

Advertisement

ಸೈನಿಕರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿ
ದಾವಣಗೆರೆ: ಉಗ್ರರ ದಾಳಿಗೆ ಬಲಿಯಾದ ವೀರಯೋಧರಿಗೆ ಶನಿವಾರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಭಾರತ ಕಮ್ಯೂನಿಸ್ಟ್‌ ಜಿಲ್ಲಾ ಮಂಡಳಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಸಿಪಿಐ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ಪಾಕ್‌ ಉಗ್ರರಿಂದ ದೇಶದ ಸೈನಿಕರ ಮೇಲೆ ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆಗೆ ಮುನ್ಸೂಚನೆ ಇದ್ದರೂ ಕೂಡ ಈ ದಾಳಿ ತಡೆಯುವಲ್ಲಿ ಭದ್ರತಾ ಪಡೆ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ಸರ್ಕಾರ ಈ ಹಿಂದೆ ಸೈನಿಕರಿಗಾಗಿ ಏನೇ ಸೌಲಭ್ಯ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದರೂ ಕೂಡ ತ್ವರಿತವಾಗಿ ಒದಗಿಸುವ ಕೆಲಸ ಮಾಡಬೇಕು. ಇಂತಹ ಕ್ರೂರ ದಾಳಿ ನಡೆಸಿರುವ ಉಗ್ರರ ಮಟ್ಟಹಾಕಲು ಸರ್ಕಾರ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಪಿಐ ಸಹ ಕಾರ್ಯದರ್ಶಿ ಆವರಗೆರೆ ಚಂದ್ರು, ಎಚ್‌.ಜಿ. ಉಮೇಶ್‌, ಆವರಗೆರೆ ವಾಸು, ಆನಂದ್‌ರಾಜ್‌, ರಂಗನಾಥ್‌, ತಿಪ್ಪೇಸ್ವಾಮಿ, ಷಣ್ಮುಖಸ್ವಾಮಿ, ರಮೇಶ್‌, ವಿ. ಲಕ್ಷ್ಮಣ್‌, ಎಂ.ಬಿ. ಶಾರದಮ್ಮ, ಸರೋಜಾ, ವಿಶಾಲಾಕ್ಷಿ ಇತರರು ಇದ್ದರು.

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಕೋರ್ಟ್‌ನಿಂದ ಕಾಲ್ನಡಿಗೆಯಲ್ಲಿ ಪಿ.ಬಿ. ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿಗಳು ಘಟನೆಗೆ ಸಂಬಂಧಿಸಿದಂತೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ಯೋಧರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವ

ಜಯದೇವ ವೃತ್ತದಲ್ಲಿ ಮಾನವ ಸರಪಳಿ
ದಾವಣಗೆರೆ: ಶ್ರೀನಗರ-ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಅವಂತಿಪೋರಾದಲ್ಲಿ ಗುರುವಾರ ಉಗ್ರರ ದಾಳಿಗೆ ಹುತಾತ್ಮರಾದ 44ಕ್ಕೂ ಹೆಚ್ಚು ವೀರಯೋಧರಿಗೆ ನಗರದ ಜಯದೇವ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮುಸ್ಲಿಂ ಎಜ್ಯುಕೇಷನ್‌ ಫಂಡ್‌ ಅಸೋಸಿಯೇಷನ್‌: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರಿಗೆ ಮುಸ್ಲಿಂ ಎಜ್ಯುಕೇಷನ್‌ ಫಂಡ್‌ ಅಸೋಸಿಯೇಷನ್‌ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ದೊಡ್ಡಪೇಟೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಮುಸ್ಲಿಂ ಗುರು ಮೌಲಾನಾ ಹನೀಫ್‌ ರಜಾಸಾಹೇಬ್‌, ಉಪಮೇಯರ್‌ ಕೆ. ಚಮನ್‌ ಸಾಬ್‌, ಸೈಯದ್‌ ಸೈಫುಲ್ಲಾ, ಸಿ.ಆರ್‌. ನಾಸೀರ್‌ ಅಹಮದ್‌, ಅಬ್ದುಲ್‌ ಲತೀಫ್‌, ಬಾಷಾ ಮೊಹಿದ್ದೀನ್‌, ಸೈಯದ್‌ ಅಲ್ತಾಫ್‌, ಸಮೀರ್‌ ಹಟೇಲಿ, ಸಲೀಂ ಖಾನ್‌, ಅಹ್ಮದ್‌ ರಜಾ, ಎನ್‌.ಕೆ. ಅಶ್ರಫ್‌, ಇನಾಯತ್‌ ಖಾನ್‌ ಇದ್ದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ: ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‌ಪಿಎಫ್‌ನ ಯೋಧರಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಾನವ ಸರಪಳಿ ನಿರ್ಮಿಸಿ ಮೇಣದ ಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ನ್ಯಾಯವಾದಿ ಮಂಜುನಾಥ್‌ ಕಾಕನೂರು, ಮಲ್ಲಿಕಾರ್ಜುನ್‌, ಜಯಪ್ರಕಾಶ್‌, ಕಲ್ಲೇಶ್‌, ಗಿರೀಜಮ್ಮ ಸೇರಿದಂತೆ ನೂರಾರು ಯೋಗಬಂಧುಗಳು ಭಾಗವಹಿಸಿದ್ದರು.

ಸವಿತಾ ಸಮಾಜ ಸಂಘ: ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಸವಿತಾ ಸಮಾಜ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಪರಶುರಾಮ್‌, ಕರಿಬಸಪ್ಪ, ಎಂ.ವಿ. ಹರೀಶ್‌, ಎನ್‌. ಗೋಪಿ, ಅರುಣ್‌ಕುಮಾರ್‌, ಎಸ್‌. ವೆಂಕಟೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next