Advertisement

ಗಿನ್ನೆಸ್‌ಗೆ ದುರ್ಗಾ ಪ್ರವೇಶ​​​​​​​

06:55 AM Sep 24, 2017 | Team Udayavani |

ಗುವಾಹಟಿ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದರೆ, ಅಸ್ಸಾಂನಲ್ಲಿ ಮುಸ್ಲಿಂ ಕಲಾವಿದರೊಬ್ಬರು ರಚಿಸಿರುವ 101 ಅಡಿ ಎತ್ತರದ ದುರ್ಗೆಯು ಇದೀಗ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿದ್ದಾಳೆ. ಇಷ್ಟು ಎತ್ತರದ ದುರ್ಗಾ ವಿಗ್ರಹವು ದೇಶದಲ್ಲಿ ತಯಾರಾಗಿರುವುದು ಇದೇ ಮೊದಲನೇ ಬಾರಿ ಎಂದು ಕಲಾವಿದ ನೂರುದ್ದೀನ್‌ ಹೇಳಿದ್ದಾರೆ. 

Advertisement

ಈ ಪ್ರತಿಮೆಗೆ ಅವರು ಬಳಸಿರುವುದು 5,000 ಬಿದಿರಿನ ಪಳೆಗಳು. ಸೆ.25ರಂದು ಈ ಮೂರ್ತಿ ಉದ್ಘಾಟ ನೆಗೊಳ್ಳಲಿದೆ ಎಂದು ಬಿಷ್ಣುಪುರ ದುರ್ಗಾ ಪೂಜಾ ಸಮಿತಿ ಹೇಳಿದೆ. ಈ ಮೂರ್ತಿ ತಯಾರಿಸಿದ ಕುರಿತು ಪ್ರತಿಕ್ರಿಯೆ ನೀಡಿರುವ ನೂರುದ್ದೀನ್‌, “ನೀನು ಮುಸ್ಲಿಮನಾಗಿದ್ದು, ದುರ್ಗಾ ಮೂರ್ತಿ ವಿನ್ಯಾಸ ಏಕೆ ಮಾಡುತ್ತಿಯ’ ಎಂದು ಹಲವರು ನನ್ನನ್ನು ಪ್ರಶ್ನಿಸಿದರು. “ನಾನು ಈ ಕೆಲಸವನ್ನು 1975ರಿಂದಲೂ ಮಾಡು ತ್ತಿದ್ದೇನೆ. ಕಲಾವಿದನಿಗೆ ಆತನ ಕಲೆಯೇ ಧರ್ಮ ಎಂದು ನಾನು ನಂಬಿದ್ದೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next