Advertisement

Assam: ಎರಡನೇ ವಿವಾಹಕ್ಕೆ ಬೇಕು ಅನುಮತಿ!

01:04 AM Oct 28, 2023 | Team Udayavani |

ಗುವಾಹಟಿ: “ಧರ್ಮದ ವ್ಯಾಪ್ತಿಯಲ್ಲಿ ಅವಕಾಶ ಇದ್ದರೂ ಅಸ್ಸಾಂ ಸರಕಾರಿ ಉದ್ಯೋಗಿಗಳು ಎರಡನೇ ಮದುವೆ ಆಗಬೇಕಾದರೆ ಸರಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು…”
– ಹೀಗೆಂದು ರಾಜ್ಯದ ಸಿಎಂ ಹಿಮಾಂತ ಬಿಸ್ವ ಶರ್ಮಾ ಶುಕ್ರವಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಗುರುವಾರ ಆದೇಶ ಹೊರಡಿಸಲಾಗಿದ್ದು, ತತ್‌ಕ್ಷಣದಿಂದಲೇ ಅದು ಜಾರಿಯಾಗಿದೆ.ದ್ವಿಪತ್ನಿತ್ವ ಅನುಸರಿಸಿದರೆ ಸರಕಾರಿ ಉದ್ಯೋಗಿಗಳಿಗೆ ಕಠಿನ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅದರಲ್ಲಿ ಎಚ್ಚರಿಕೆ ನೀಡಲಾಗಿದೆ.

Advertisement

ಅದಕ್ಕೆ ಪೂರಕವಾಗಿ ಗುವಾಹಟಿಯಲ್ಲಿ ಮಾತ ನಾಡಿದ ಹಿಮಾಂತ ಬಿಸ್ವ ಶರ್ಮಾ, “ಇದು ಹೊಸ ನಿಯಮವೇನಲ್ಲ. ಸೇವಾ ನಿಯಮಗಳ ಅನ್ವಯ ಸರಕಾರಿ ಉದ್ಯೋಗಿಗಳು 2ನೇ ವಿವಾಹ ಆಗುವಂತಿಲ್ಲ. ಕೆಲವು ಧರ್ಮಗಳಲ್ಲಿ 2ನೇ ವಿವಾಹಕ್ಕೆ ಅನುಮತಿ ಇದ್ದರೂ ಸೇವಾ ನಿಯಮಗಳ ಹಿನ್ನೆಲೆಯಲ್ಲಿ ಅದು ಸಾಧುವಲ್ಲ.

ಹೀಗಾಗಿ ಸರಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ. 2ನೇ ವಿವಾಹಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ಸರಕಾರ ಅನುಮತಿ ನೀಡಬಹುದು ಅಥವಾ ನೀಡದೆ ಇರಬಹುದು. ಸರಕಾರಿ ಉದ್ಯೋಗಿ ಅಸುನೀಗಿದಾಗ ಪಿಂಚಣಿ ನೀಡುವ ಬಗ್ಗೆ ಸಮಸ್ಯೆ ಉಂಟಾಗಿ, ಸಲ್ಲಿಕೆಯಾಗಿರುವ ದೂರುಗಳನ್ನು ಇತ್ಯರ್ಥಗೊಳಿಸಲು ಸಮಸ್ಯೆಯಾಗುತ್ತದೆ ಎಂದು ಸಿಎಂ ಹಿಮಾಂತ ಹೇಳಿದ್ದಾರೆ. ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಯೇ ಈ ನಿಯಮ ಇತ್ತು. ಅದನ್ನು ನಾವು ಜಾರಿ ಮಾಡಿದ್ದೇವೆ ಎಂದರು.

ಮಹಿಳೆಯರಿಗೂ ಅನ್ವಯ
ಮಹಿಳಾ ಸರಕಾರಿ ಉದ್ಯೋಗಿ ಕೂಡ ಪತಿ ಇರುವಂತೆಯೇ 2ನೇ ವಿವಾಹ ಆಗುವಂತಿಲ್ಲ. ಒಂದು ವೇಳೆ ಆಗುವುದಿದ್ದರೂ ರಾಜ್ಯ ಸರಕಾರದ ಅನುಮತಿ ಬೇಕು ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ. ಸ್ವಲ್ಪ ಸಮಯದ ಹಿಂದೆ ಶರ್ಮಾ ಅವರು ಬಹುಪತ್ನಿತ್ವ ನಿಷೇಧದ ಬಗ್ಗೆ ಪ್ರಸ್ತಾವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next