Advertisement

ಅಸ್ಸಾಂ- ನಾಗಾ ಗಡಿ ವಿವಾದ ಅಂತ್ಯ

11:28 PM Jul 31, 2021 | Team Udayavani |

ಹೊಸದಿಲ್ಲಿ: ದಶಕಗಳಿಂದ ಕಗ್ಗಂಟಾಗಿರುವ ಅಸ್ಸಾಂ, ನಾಗಾಲ್ಯಾಂಡ್‌ ಗಡಿ ವಿವಾದವನ್ನು ಎರಡೂ ರಾಜ್ಯ ಸರಕಾರಗಳು ಪರಸ್ಪರ ಸಮಾಲೋಚನೆ ಹಾಗೂ ತಿಳಿವಳಿಕೆಯ ಮೂಲಕ ಇತ್ಯರ್ಥಪಡಿಸಿಕೊಂಡಿವೆ.

Advertisement

ಗಡಿ ವಿವಾದ ಇತ್ಯರ್ಥ ಬಗ್ಗೆ ಟ್ವೀಟ್‌ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್‌ ಶರ್ಮಾ, “ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಮಟ್ಟದ ಸಮಾವೇಶದಲ್ಲಿ ಪರಸ್ಪರ ಚರ್ಚೆ ಹಾಗೂ ತಿಳಿವಳಿಕೆಯ ಆಧಾರದಲ್ಲಿ ವಿವಾದ ಇತ್ಯರ್ಥಗೊಂಡಿದೆ. ಸಮಸ್ಯೆ ಇತ್ಯರ್ಥಗೊಳಿಸುವಲ್ಲಿ ಸಹಕರಿಸಿದ ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೈಪುಯು ರಿಯೋ ಅವರಿಗೆ ಧನ್ಯವಾದ. ಇದೊಂದು ಚರಿತ್ರಾರ್ಹ ಸಾಧನೆ’ ಎಂದಿದ್ದಾರೆ.

ಒಪ್ಪಂದದ ಪ್ರಮುಖಾಂಶ :

  • ಗಡಿಯಲ್ಲಿನ  ಎರಡೂ ರಾಜ್ಯಗಳ ಪೊಲೀಸ್‌ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದು.
  • ಉಪಗ್ರಹದ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಎರಡೂ ರಾಜ್ಯಗಳ ಗಡಿಯನ್ನು ಮರು ಗುರುತು ಮಾಡಿಕೊಳ್ಳುವುದು.
  • ಗಡಿ ಭಾಗದ ಜನತೆಯ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಎರಡೂ ರಾಜ್ಯಗಳು ಒಟ್ಟಾಗಿ ಶ್ರಮಿಸುವುದು.

ಏನಿದು ವಿವಾದ? :

ಭಾರತದ ಈಶಾನ್ಯ ಭಾಗದಲ್ಲಿರುವ ನಾಗಾಲ್ಯಾಂಡ್‌, ಮೂಲತಃ ಅಸ್ಸಾಂನ ಭಾಗವಾಗಿತ್ತು. ಆಗ ಅದನ್ನು ನಾಗಾಹಿಲ್ಸ್‌ ಜಿಲ್ಲೆಯೆಂದೇ ಕರೆಯಲಾಗುತ್ತಿತ್ತು. 1963ರ ಡಿ. 1ರಂದು ಈ ಪ್ರಾಂತ್ಯ ಅಸ್ಸಾಂನಿಂದ ಬೇರೆಯಾಗಿ ನಾಗಾಲ್ಯಾಂಡ್‌ ಎಂಬ ಹೆಸರಿನ ಹೊಸ ರಾಜ್ಯವಾಗಿ ರೂಪುಗೊಂಡಿತು. ಆದರೆ ನಾಗಾ ಬುಡಕಟ್ಟು ಜನಾಂಗದ ಪ್ರಾಚೀನ ಕುರುಹುಗಳು ಇನ್ನೂ ಜೀವಂತವಾಗಿರುವ ಅಸ್ಸಾಂನ ಇನ್ನೂ ಕೆಲವು ಪ್ರದೇಶಗಳನ್ನು ತನ್ನ ವ್ಯಾಪ್ತಿಗೆ ಸೇರಿಸಬೇಕೆಂದು ನಾಗಾಲ್ಯಾಂಡ್‌ ಪಟ್ಟು ಹಿಡಿದಿತ್ತು. ಇದೇ ಗಡಿ ವಿವಾದದ ಮೂಲ.

Advertisement

ಹಿಮಂತ ವಿರುದ್ಧ ಎಫ್ಐಆರ್‌!:

ಅಸ್ಸಾಂ- ಮಿಜೋರಾಂ ಗಡಿ ವಿವಾದಕ್ಕೆ ಸಂಬಂಧಿಸಿ, ಎರಡೂ ರಾಜ್ಯಗಳ ಗಡಿ ಭಾಗಗಳಲ್ಲಿ ತಟಸ್ಥ ಪಡೆಯೊಂದು ಶಾಂತಿಪಾಲನ ಪಡೆಯಂತೆ ಸೇವೆ ಸಲ್ಲಿಸಬೇಕೆಂದು ಹಿಮಂತ ಬಿಸ್ವಾಸ್‌ ಆಗ್ರಹಿಸಿದ್ದಾರೆ. ಈ ನಡುವೆ ಜು. 26ರಂದು ಅಸ್ಸಾಂ- ಮಿಜೋರಾಂ ಗಡಿಯಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಿಮಂತ ಹಾಗೂ ಅಸ್ಸಾಂ ಪೊಲೀಸ್‌ ಇಲಾಖೆಯ 6 ಹಿರಿಯ ಅಧಿಕಾರಿಗಳ ವಿರುದ್ಧ ಮಿಜೋರಾಂ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next