Advertisement
ಈ ಬಗ್ಗೆ ಪ್ರತಿಕ್ರಿಸಿದ ಅವರು, ಘರ್ಷಣೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಸಂತಾಪವನ್ನು ಸೂಚಿಸಿ, ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಇದೊಂದು ಘರ್ಷಣೆಯ ದ್ವೇಷ, ಇದು ಅಲ್ಲಿ ಬದುಕುತ್ತಿರುವ ಜನರಿಗೆ ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ ಎಂದಿದ್ದಾರೆ.
Related Articles
Advertisement
ಉಭಯ ರಾಜ್ಯಗಳ ನಡುವೆ ದೀರ್ಘಕಾಲದಿಂದ ಇರುವ ಭೂ ವಿವಾದವೇ ಈ ಗಲಭೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿಂಸಾಚಾರದ ಕುರಿತು ಶಾ ಅವರು ಅಸ್ಸಾಂ ಮತ್ತು ಮಿಜೋರಾಂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದರು ಮತ್ತು ಸಂಘರ್ಷವನ್ನು ಶೀಘ್ರ ಪರಿಹರಿಸುವಂತೆ ಒಂದು ಪರಿಹಾರ ಮಾರ್ಗವನ್ನು ಕಂಡುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಹೇಳಲಾಗಿದೆ. ಮೂಲಗಳ ಪ್ರಕಾರ, ಪರಿಸ್ಥಿತಿಯನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮಿಜೋರಾಂ ಮುಖ್ಯಮಂತ್ರಿ ಒರಮ್ ಥಂಗಾ ಭರವಸೆ ನೀಡಿದ್ದಾರೆ.
ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್, ಕೊಲಾಸಿಬ್ ಮತ್ತು ಮಾಮಿತ್ಗಳು, ಅಸ್ಸಾಂನ ಕ್ಯಾಚರ್, ಹಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ಅಂತರ ರಾಜ್ಯ ಗಡಿಯನ್ನು ಹಂಚಿಕೊಂಡಿವೆ. ಹಿಂದಿನ ದಿನ, ಅಸ್ಸಾಂ ಪೊಲೀಸರು, ಕಚಾರ್ ಜಿಲ್ಲಾ ಆಡಳಿತದೊಂದಿಗೆ, ಮಿಜೋರಾಂ ಜನರು ಆಕ್ರಮಿಸಿಕೊಂಡಿದ್ದಾರೆಂದು ಹೇಳಲಾದ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. ವರದಿಯ ಪ್ರಕಾರ, ಅಸ್ಸಾಂ ಹಾಗು ಮಿಜೋರಾಂಗೆ ಎರಡೂ ರಾಜ್ಯಕ್ಕೆ ಸೇರಿದೆ ಎನ್ನಲಾದ ಸುಮಾರು 6.5 ಕಿ.ಮೀ ಭೂಮಿ ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಯಾವುದೇ ಭೂಮಿಯನ್ನು ಅತಿಕ್ರಮಣ ಮಾಡುವುನ್ನು ನಾವು ಒಪ್ಪುವುದಿಲ್ಲ ಎಂದು ಮಿಜೋರಾಂ ಸರ್ಕಾರ ಹೇಳಿದೆ.
ಇದನ್ನೂ ಓದಿ : ಬಿಎಸ್ ವೈ ರಾಜೀನಾಮೆ ಹಿಂದಿನ ಮರ್ಮ ಬಿಜೆಪಿ ಹೈಕಮಾಂಡ್ ಬಹಿರಂಗಪಡಿಸಲಿ : ಪರಮೇಶ್ವರ್