Advertisement
ಹಲವಾರು ಪೊಲೀಸರು ಹಾಗೂ ನಾಗರಿಕರು ಗಾಯಗೊಂಡಿದ್ದಾರೆ. ಅಸ್ಸಾಂನ ಕಚಾರ್ ಹಾಗೂ ಮಿಜೋರಾಂನ ಕೊಲಾಸಿಬ್ ಜಿಲ್ಲೆಗಳ ಗಡಿಯಲ್ಲಿನ ಎಂಟು ರೈತರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದೇ ಈ ಗಲಭೆಗೆ ಕಾರಣ ಎನ್ನಲಾಗಿದೆ.
Related Articles
Advertisement
ಸೋಮವಾರ ಬೆಳಿಗ್ಗೆ 11.30 ರ ಸುಮಾರಿಗೆ ವೈರೆಂಗ್ಟೆ ಆಟೋರಿಕ್ಷಾ ಸ್ಟ್ಯಾಂಡ್ ಬಳಿ ಮಿಜೋರಾಂ ಪೊಲೀಸರು ಮತ್ತು ಸಿಆರ್‌ಪಿಎಫ್ ನಿರ್ವಹಿಸುತ್ತಿದ್ದ ಪೋಸ್ಟ್ ನ್ನು ಸುಮಾರು 200 ಅಸ್ಸಾಂ ಪೊಲೀಸ್ ಸಿಬ್ಬಂದಿ ಅತಿಕ್ರಮಿಸಿದ್ದಾರೆ ಎಂದು ಮಿಜೋರಾಂ ಗೃಹ ಸಚಿವ ಲಾಲ್ ಚಮ್ಲಿಯಾನಾ ಹೇಳಿದ್ದಾರೆ.
ವೈರೆಂಗ್ಟೆ ಪಟ್ಟಣದ ಸ್ಥಳೀಯರು ಪರಿಸ್ಥಿತಿಯ ಬಗ್ಗೆ ವಿಚಾರಿಸಿದಾಗ ಲಾಠಿ ಚಾರ್ಜ್ ಮಾಡಲಾಗಿತ್ತು ಎಂದು ಮಿಜೋರಾಂ ಸರ್ಕಾರ ತಿಳಿಸಿದೆ. ಮಿಜೋರಾಂ ಪೊಲೀಸರ ಮೇಲೆ ಅಶ್ರುವಾಯು ಮತ್ತು ಗ್ರೆನೇಡ್‌ಗಳನ್ನು ಸಿಡಿಸಲಾಗಿದೆ, ನಂತರ ಸಂಜೆ 4.50 ರ ಸುಮಾರಿಗೆ ಅಸ್ಸಾಂ ಕಡೆಯಿಂದ ಗುಂಡು ಹಾರಿಸಲಾಯಿತು ಎಂದು ಮಿಜೋ ಸರ್ಕಾರ ಹೇಳಿದೆ.
ಘರ್ಷಣೆಯನ್ನು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅಸ್ಸಾಂ ಸಚಿವ ಪರಿಮಲ್ ಸುಕ್ಲಾಬೈದ್ಯ, ಸುಮಾರು 80 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಅಂತಾರಾಜ್ಯ ಗಡಿಯ ಅಸ್ಸಾಂ ಕಡೆಯಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.