Advertisement

Assam;ಶೀಘ್ರವೇ ಲವ್‌ ಜೆಹಾದ್‌ಗೆ ಜೀವಾವಧಿ ಶಿಕ್ಷೆ:ಹಿಂದೂ-ಮುಸ್ಲಿಂ ಭೂಮಾರಾಟಕ್ಕೆ ಹೊಸ ನಿಯಮ

12:29 AM Aug 05, 2024 | Team Udayavani |

ಗುವಾಹಾಟಿ: “ಲವ್‌ ಜೆಹಾದ್‌’ ಪ್ರಕರಣಗಳಲ್ಲಿನ ಅಪರಾಧಕ್ಕೆ ಇನ್ನು ಮುಂದೆ ಜೀವಾವಧಿ ಶಿಕ್ಷೆ ವಿಧಿಸುವಂಥ ಕಾನೂನನ್ನು ಶೀಘ್ರವೇ ನಮ್ಮ ಸರಕಾರ ಜಾರಿಗೊಳಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

Advertisement

ರವಿವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿರುವ ಶರ್ಮಾ, “ಲವ್‌ ಜೆಹಾದ್‌ಗೆ ಕಡಿವಾಣ ಹಾಕಲು  ಕಾನೂನು ರೂಪಿಸುವುದಾಗಿ ನಾವು ಹೇಳಿದ್ದೆವು. ಅದರಂತೆ ಶೀಘ್ರವೇ ಕಾನೂನು ಜಾರಿ ಮಾಡಲಿದ್ದೇವೆ. ಲವ್‌ ಜೆಹಾದ್‌ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂಥ ಕಾನೂನು ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ’ ಎಂದಿದ್ದಾರೆ.

ಜತೆಗೆ ರಾಜ್ಯದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಭೂಮಿ ಖರೀದಿ ಹಾಗೂ ಮಾರಾಟ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ರೂಪಿಸುವ ನಿರ್ಧಾರವನ್ನೂ ಸರಕಾರ ತೆಗೆದುಕೊಂಡಿದೆ ಎಂದೂ ಅವರು ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಜನಿಸಿದವರಿಗೆ ಮಾತ್ರ ಇಲ್ಲಿನ ಸರಕಾರಿ ಉದ್ಯೋಗಗಳು ಲಭ್ಯವಾಗುವುದನ್ನು ಖಾತರಿ ಪಡಿಸಿಕೊಳ್ಳುವ ಹೊಸ ನೀತಿ ಯನ್ನೂ ಪರಿಚಯಿಸಲಾಗುವುದು ಎಂದೂ ಶರ್ಮಾ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next