Advertisement
ಅಷ್ಟೇ ಯಾಕೆ, ವಿದೇಶಿ ಬೆಡಗಿಯರೂ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಆ ಸಾಲಿಗೆ ಈಗ ಅಸ್ಸಾಂ ಚೆಲುವೆಯ ಎಂಟ್ರಿಯಾಗಿದೆ. ಹೌದು, ಕನ್ನಡಕ್ಕೆ ಅಸ್ಸಾಂ ಚೆಲುವೆಯ ಸ್ಪರ್ಶವಾಗಿದೆ. ಅಷ್ಟಕ್ಕೂ ಆ ಅಸ್ಸಾಂ ಚೆಲುವೆಯ ಹೆಸರು ಕರಿಷ್ಮಾ ಬರುಹ.
Related Articles
Advertisement
ಚಿತ್ರದ ಪಾತ್ರಕ್ಕೆ ಏನೆಲ್ಲಾ ತಯಾರಿ ಬೇಕಿತ್ತೋ, ಅದನ್ನೆ ಚಾಚೂ ತಪ್ಪದೆ ನಿರ್ವಹಿಸಿರುವ ನಾಯಕಿ ಕರಿಷ್ಮಾ ಬರುಹ ಅವರಿಗೂ “ಖನನ’ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇದೆ. ತಮ್ಮ ಪಾತ್ರ ಕುರಿತು ಹೇಳುವ ಕರಿಷ್ಮಾ ಬರುಹ, “ಇದೊಂದು ಅಪರೂಪದ ಕಥೆ ಮತ್ತು ಪಾತ್ರ. ಮೊದಲ ಕನ್ನಡ ಚಿತ್ರ ಎಂಬುದು ಇನ್ನೊಂದು ಹೆಮ್ಮೆ.
ಕಥೆಯಲ್ಲಿ ಸಾಕಷ್ಟು ಏರಿಳಿತಗಳಿವೆ. ಪಾತ್ರದಲ್ಲೂ ಬಗೆಬಗೆಯ ಬದಲಾವಣೆಗಳೂ ಇವೆ. ಹಾಗೆ ಹೇಳುವುದಾದರೆ, ನನ್ನ ಪಾತ್ರ ಒಂದು ರೀತಿ ನೆಗೆಟಿವ್ ಶೇಡ್‌ನಲ್ಲಿದೆ. ಅದು ಯಾಕೆ ಅನ್ನುವುದನ್ನು ಚಿತ್ರದಲ್ಲೇ ಕಾಣಬೇಕು’ ಎನ್ನುತ್ತಾರೆ ಕರಿಷ್ಮಾ ಬರುಹ. ಇದು ಸಂಪೂರ್ಣ ಹೊಸಬರ ಚಿತ್ರ. ನಾಯಕ ಆರ್ಯವರ್ಧನ್ ಅವರಿಗೆ ಇದು ಮೊದಲ ಚಿತ್ರ.
ಅವರು ಮೊದಲ ಸಿನಿಮಾದಲ್ಲೇ ಅವರು ಐದು ಶೇಡ್ ಇರುವ ಪಾತ್ರ ಮಾಡಿದ್ದಾರೆ. ಅವರಿಲ್ಲಿ ಒಬ್ಬ ಆರ್ಕಿಟೆಕ್ಟ್ ಆಗಿಯೂ, ದೇಹದಾರ್ಢ್ಯ ಪಟುವಾಗಿಯೂ, ಸೈಕೋ ಪಾತ್ರದಲ್ಲೂ ಮಿಂಚಿದ್ದಾರೆ. ಇನ್ನೂ ಎರಡು ಶೇಡ್ ಪಾತ್ರ ಯಾವುದು ಎಂಬ ಕುತೂಹಲಕ್ಕೆ “ಖನನ’ ನೋಡಬೇಕು. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಸಿನಿಮಾಗೆ ಬಿ.ಶ್ರೀನಿವಾಸ್‌ರಾವ್ ನಿರ್ಮಾಪಕರು.