Advertisement

ಕಮಲ ಹಿಡಿದ ಕೈ ಬಂಡಾಯ ಶಾಸಕ ಎ.ಎಸ್‌.ಪಾಟೀಲ್‌ ನಡಹಳ್ಳಿ  

11:26 AM Mar 21, 2018 | |

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಯಾಗಿದ್ದ  ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. 

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬೆಂಬಲಿಗೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 

ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡ ಬಳಿಕ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದ ನಡಹಳ್ಳಿ ಗೆ ಮುದ್ದೇಬಿಹಾಳ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ನೀಡುವುದಾಗಿ ಹೇಳಲಾಗಿತ್ತಾದರೂ ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ದೇವರ ಹಿಪ್ಪರಗಿ ಕ್ಷೇತದ ಜೆಡಿಎಸ್‌ ಟಿಕೆಟನ್ನು ಪತ್ನಿಗೆ ನೀಡದ ಕಾರಣಕ್ಕೆ ಪಕ್ಷ ತೊರೆದಿರುವುದು ನಡಹಳ್ಳಿ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. 

ಟಿಕೆಟ್‌ ಖಚಿತ !

Advertisement

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ ‘ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಇದೆ. ನಡಹಳ್ಳಿ ಅವರಿಗೆ ಅಸೆಂಬ್ಲಿ ಟಿಕೆಟ್‌ ನೀಡುವುದು ಖಚಿತ. ಯಾವ ಕ್ಷೇತ್ರ ಎನ್ನುವುದು ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುತ್ತದೆ’ ಎಂದರು. 

ಜೆಡಿಎಸ್‌ ಕಟ್ಟಲು ಕೆಲಸ ಮಾಡಿದ್ದು ನಿಜ 

ಸುದ್ದಿಗಾರರೊಂದಿಗೆ ಮಾತನಾಡಿದ ನಡಹಳ್ಳಿ ‘ನಾನು ಕಾಂಗ್ರೆಸ್‌ನಿಂದ ಉಚ್ಛಾಟನೆ ಯಾದ ಬಳಿಕ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದು ನಿಜ. ದೇವರಹಿಪ್ಪರಗಿಯಲ್ಲಿ ಜೆಡಿಎಸ್‌ ಕಟ್ಟಲು ಕೆಲಸ ಮಾಡಿದ್ದು ನಿಜ. ಕುಮಾರಸ್ವಾಮಿ ಅವರನ್ನು ದೇವರ ಹಿಪ್ಪರಗಿಯಿಂದ ಕಣಕ್ಕಿಳಿಸಿ ಗೆಲ್ಲಿಸಬೇಕು ಅಂದುಕೊಂಡಿದ್ದೆ, ಆದರೆ ಟಿಕೇಟ್‌ ಹಂಚಿಕೆಯಲ್ಲಿ ಆದ ಗೊಂದಲದಿಂದ ಜೆಡಿಎಸ್‌ನಿಂದ ಹಿಂದೆ ಸರಿದು ಬಿಜೆಪಿ ಸೇರ್ಪಡೆಯಾಗಿದ್ದೇನೆ’ ಎಂದರು. 

‘ದೇವರ ಹಿಪ್ಪರಗಿ ಕ್ಷೇತ್ರ ನಾನು ಕಟ್ಟಿದ ಮನೆ, ನನ್ನ ಮನೆಯಲ್ಲಿ ಬೇರೆಯವರಿಗೆ ಅವಕಾಶ ಕೊಡಲಿಕ್ಕೆ ಆಗುತ್ತದಾ? ನನ್ನ ಪತ್ನಿ ಯಾಕೆ ನಿಲ್ಲಬಾರದು? ಅಣ್ಣ -ತಮ್ಮ ನಿಲ್ಲ ಬಹುದು, ಅಪ್ಪ -ಮಗ ನಿಲ್ಲ ಬಹುದು. ಒಬ್ಬ ಹೆಣ್ಣು ಮಗಳು ನಿಲ್ಲಬಾರಾದ’ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next