Advertisement
ನಗರದಲ್ಲಿ ಬುಧವಾರ ಮಾತನಾಡಿ, ಈ ರೀತಿ ವೃತಾಆರೋಪ, ಟೀಕೆಗಳಿಗೆ ನಾವು ಜಗ್ಗುವುದಿಲ್ಲ. ನಮ್ಮನ್ನು ಹತ್ಯೆ ಮಾಡಿದರೂ ಸರಿ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಕೈ ಬಿಡುವುದಿಲ್ಲ. ಇಷ್ಟು ದಿನಗಳ ಕಾಲ ರಾಜಕೀಯ ಎಂಬ ಚಿನ್ನದ ಬಿಸ್ಕಟ್ ತೋರಿಸಿ, ನಮ್ಮನ್ನು ಕತ್ತಲೆಯಲ್ಲಿ ಮುಳುಗಿಸಿದ್ದರು. ಈಗ ಜ್ಞಾನದ ಜ್ಯೋತಿ ಬೆಳಗುತ್ತಿದೆ. ಈ ಹೋರಾಟಕ್ಕಾಗಿ ಬಸವರಾಜ ಹೊರಟ್ಟಿ,ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಅವರು ತಮ್ಮ ರಾಜಕೀಯ ಭವಿಷ್ಯವನ್ನೇ ಒತ್ತೆಯಿಟ್ಟಿದ್ದಾರೆ ಎಂದರು.
ಬೆಂಗಳೂರು: “ವೀರಶೈವ-ಲಿಂಗಾಯತ ಎರಡೂ ಸಮಾನಾರ್ಥಕವಾಗಿದ್ದು, ಇವರಿಬ್ಬರೂ ಹಿಂದೂಗಳೇ ಆಗಿದ್ದಾರೆ’
ಎಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಬಸವಣ್ಣನವರು “ವೀರಶೈವ’ದ ಅನ್ವಯಿಕ ವಿಜ್ಞಾನಿ. ಹಿಂದೂಗಳಲ್ಲಿರುವ ಶಿವ, ರುದ್ರಾಕ್ಷಿ,ವಿಭೂತಿ, ದ್ವೆ„ತ, ಅದ್ವೆ„ತ ಪರಿಕಲ್ಪನೆಗಳು ಸೇರಿ ಬಹುತೇಕ ಎಲ್ಲ ಪದ್ಧತಿಗಳೂ ವೀರಶೈವದಲ್ಲಿವೆ. ಹಾಗಾಗಿ, ವೀರಶೈವ- ಲಿಂಗಾಯತರು ಹಿಂದೂ ಧರ್ಮದ ಒಂದು ಭಾಗವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
ಇಷ್ಟಲಿಂಗವು ಮೇಲ್ನೋಟಕ್ಕೆ ಗೋಳಾಕಾರವಾಗಿದ್ದರೂ ಅದು ಕಂತೆ ಬಿಗಿದ ಸ್ಥಾವರ ಲಿಂಗದ ಸಂಕ್ಷಿಪ್ತ ರೂಪ. ಆ ಸಂಕ್ಷಿಪ್ತ ರೂಪವನ್ನು “ಪುಟ್ಟಲಿಂಗ’ ಎಂದೂ ಕರೆಯುತ್ತಾರೆ. ಅಲ್ಲದೆ, ಕಳೆದ ಶತಮಾನದಲ್ಲಿ ಕೆಲ ವೀರಶೈವರು ತಮ್ಮನ್ನು “ವೀರಶೈವ ಬ್ರಾಹ್ಮಣರು’ ಎಂದೂ ಕರೆದುಕೊಂಡಿದ್ದಾರೆ.ಅಷ್ಟೇ ಅಲ್ಲ, ಹಲವು ವಚನಗಳಲ್ಲಿ ವೇದಗಳಿಂದ ಉಕ್ತಿಗಳನ್ನು ಬಳಸಿಕೊಂಡ ಉದಾಹರಣೆಗಳಿವೆ ಎಂದು ತಿಳಿಸಿದರು. ಶಾಮನೂರುಗೆ ಬುದ್ಧಿ ಭ್ರಮಣೆ’
ಬಸವಕಲ್ಯಾಣ: ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟಿರುವ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮತ್ತು ವೀರಶೈವ ಮಹಾಸಭೆಯ ಕೆಲವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಬಸವ ಧರ್ಮ ಪೀಠದ ಬಸವಪ್ರಭು ಸ್ವಾಮೀಜಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು,ಲಿಂಗಾಯತ ಮಠಾಧೀಶ ರಿಗೆ ಕಾರು,ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದದ್ದು. ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.
Related Articles
– ಶ್ರೀ ನಿಜಗುಣ ಪ್ರಭು
ಸ್ವಾಮೀಜಿ, ಮುಂಡರಗಿ
Advertisement