Advertisement

ಚಿಕ್ಕಬಳ್ಳಾಪುರ:ಎಎಸ್‍ಐ ಮನೆ ಮೇಲೆ ದಾಳಿ; ಮೂವರು ಅಂತಾರಾಜ್ಯ ದರೋಡೆಕೋರರ ಬಂಧನ

09:40 PM Nov 14, 2022 | Team Udayavani |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಎಎಸ್‍ಐ ನಾರಾಯಣಸ್ವಾಮಿ ಅವರ ಮನೆಯಲ್ಲಿ ನುಗ್ಗಿ ಅಡ್ಡಬಂದಿದ್ದ ಎಎಸ್‍ಐ ನಾರಾಯಣಸ್ವಾಮಿ ಮತ್ತು ಅವರ ಪುತ್ರನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿ ಪರಾರಿಯಾಗಿದ್ದ ನಾಲ್ವರು ದರೋಡೆಕೋರರ ಪೈಕಿ ಮೂವರನ್ನು ಜಿಲ್ಲಾ ಪೋಲಿಸರು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಉತ್ತರಪ್ರದೇಶದ ರಾಜ್ಯದ ಬಿಜ್ನೂರು ಜಿಲ್ಲೆಯ ಬಹಿರಂ ನಗರದ ಆರೀಫ್ ಅಲಿಯಾಸ್ ಮಹಮದ್ ಆರೀಫ್ ಅನ್ಸಾರಿ (35), ಉತ್ತರಪ್ರದೇಶ ರಾಜ್ಯ ರಾಮ್‍ಪುರ ಜಿಲ್ಲೆಯ ಮಿಲಕ್ ತಾಲೂಕಿನ ಚಿಂತಮಾನ್ ಖಾತೆ ಗ್ರಾಮದ ಜಮಷೇದ್ ಖಾನ್ ಅಲಿಯಾಸ್ ಚೋಟು(27), ಹಾಗೂ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ನಗರದ ನಿಝಾಮ ಅಲೀ ಕಾಲೋನಿಯ ನಿವಾಸಿ ಪಠಾನ್ ಮೊಹ್ಮದ್ ಹ್ಯಾರೀಸ್ ಖಾನ್(30 )ಬಂಧಿತ ಆರೋಪಿಗಳು.

ಚಿಕ್ಕಬಳ್ಳಾಪುರ ತಾಲೂಕಿನ ಪೆರೆಸಂದ್ರ ಗ್ರಾಮದ ನಿವಾಸಿ ಎಎಸ್‍ಐ ನಾರಾಯಣಸ್ವಾಮಿ ಅವರ ಪತ್ನಿ ಸುಗುಣ ಅವರ ಪೆರೇಸಂದ್ರ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಅವರ ಮಾರ್ಗದರ್ಶನದಲ್ಲಿ 5 ತನಿಖಾ ತಂಡಗಳನ್ನು ರಚಿಸಿ ಆರೋಪಿಗಳನ್ನು ಶೋಧನೆ ಮಾಡುವ ಕಾರ್ಯದಲ್ಲಿ ತೊಡಗಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 03 ತಪಂಚಗಳು (ನಾಡ ಪಿಸ್ತೂಲ್), ಖಾಲಿ ಮ್ಯಾಗಿನ್ ಒಳಗೊಂಡಿರುವ ಒಂದು ಪಿಸ್ತೂಲ್, 46 ಜೀವಂತ ಬುಲೆಟ್‍ಗಳು ಒಟ್ಟು 3 ಲಕ್ಷ 41 ಸಾವಿರ ರೂ. ನಗದು, ) ಕೃತ್ಯಕ್ಕೆ ಬಳಸಿದ್ದ ಕಾರು , 71.702 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, ಮತ್ತು ಬೆಳ್ಳಿಯ 21 ಪೂಜೆ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ ಆರೋಪಿ ಆರೀಫ್ ಬೇಕರಿ ಅಂಗಡಿಯಲ್ಲಿ ಕೆಲಸ, ಜಮಷೇದ್ ಖಾನ್ ಕಾರ್ಪೇಂಟರ್ ಕೆಲಸ ಮತ್ತು ಪಠಾನ್ ಮೊಹ್ಮದ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿದ ತಂಡ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಗರಿಕರಲ್ಲಿ ಆತಂಕ ಮೂಡಿಸಿದ ದರೋಡ ಪ್ರಕರಣವನ್ನು ಭೇದಿಸುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಆರೋಪಿಗಳನ್ನು ಬಂಧಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಅವರ ಮಾರ್ಗದರ್ಶನದಲ್ಲಿ 5 ತಂಡಗಳನ್ನು ರಚಿಸಲಾಗಿತ್ತು ಅದರಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ವಿ.ಕೆ.ವಾಸುದೇವ್ ಅವರ ನೇತೃತ್ವದಲ್ಲಿ ಗುಡಿಬಂಡೆ ಸಿಪಿಐ ಲಿಂಗರಾಜ, ಡಿ.ಆರ್.ನಾಗರಾಜ್,ಪಿಐ, ಬಾಗೇಪಲ್ಲಿ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಸಿಪಿಐ ಬಿ.ರಾಜು, ಗೌರಿಬಿದನೂರು ಸಿಪಿಐ ಕೆ.ಪಿ.ಸತ್ಯನಾರಾಯಣ,ಪೆರೆಸಂದ್ರ ಪಿಎಸ್‍ಐ ಮಂಜುನಾಥ್, ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ನಾರಾಯಣಸ್ವಾಮಿ, ಮುರಳಿ, ರವಿಕುಮಾರ್, ಮುನಿಕೃಷ್ಣ, ರಿಜ್ವಾನ್, ಅಶ್ವಥ್, ಆನಂದ.ಎನ್. ಮಾರುತಿ, ಬಾಬಾಜಾನ್, ಶ್ರೀನಿವಾಸ, ಕರಿಬಾಬು, ದಕ್ಷಿಣಮೂರ್ತಿ, ಆರುಣ್, ಆನಂದ, ಮೋಹನ,ಧನಂಜಯ, ಆಶೋಕ, ಸಾಗರ್, ವಿನಾಯಕ, ಮಂಜುನಾಯ್ಡ್, ಸಂತೋಷ್ ಕುಮಾರ್ ಅವರು ಆರೋಪಿತರು ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next