Advertisement

‘ಇಮ್ರಾನ್ ಒಬ್ಬ ಬ್ಯಾಕ್ ಸೀಟ್ ಡ್ರೈವರ್’-ಪಾಕ್ ಮಾಜಿ ಅಧ್ಯಕ್ಷ ಜರ್ದಾರಿ

04:19 AM Feb 21, 2019 | |

ಇಸ್ಲಮಾಬಾದ್: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಗೆ ಯಾವುದೇ ಅಂತಾರಾಷ್ಟ್ರೀಯ  ರಾಜಕಾರಣದ ಯಾವುದೇ ಅನುಭವವಿಲ್ಲ. ಪುಲ್ವಾಮಾ ದಾಳಿಯ ನಂತರ ಪಾಕ್ ಮೇಲೆ ಭಾರತ ನಡೆಸಿದ ಆರೋಪಗಳಿಗೆ ಉತ್ತರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪಾಕಿಸ್ಥಾನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ. 

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಮಾಜಿ ಅಧ್ಯಕ್ಷ, ಇಮ್ರಾನ್ ಖಾನ್ ರಾಜಕೀಯದಲ್ಲಿ ಇನ್ನೂ ಪಕ್ವವಾಗಿಲ್ಲ. ಅವರಿಗೆ ದೇಶ ನಡೆಸಲು ಗೊತ್ತಿಲ್ಲ. ‘ಇಮ್ರಾನ್ ಒಬ್ಬ ಬ್ಯಾಕ್ ಸೀಟ್ ಡ್ರೈವರ್ ’ ಎಂದು ಜರಿದರು.

ಮುಂದುವರಿದು ಮಾತನಾಡಿದ ಜರ್ದಾರಿ, ನನ್ನ ಆಡಳಿತಾವಧಿಯಲ್ಲಿ ಮುಂಬೈ ದಾಳಿ ನಡೆದಿತ್ತು. ಆ ಸಮಯದಲ್ಲಿ ಕೂಡಾ ಭಾರತ ಪಾಕಿಸ್ಥಾನದ ಮೇಲೆ ಆರೋಪ ಮಾಡಿತ್ತು. ಆದರೆ ಆಗ ಪಾಕಿಸ್ಥಾನ ರಾಜತಾಂತ್ರಿಕವಾಗಿ ಈ ಘಟನೆಯನ್ನು ನಿಭಾಯಿಸುವಲ್ಲಿ ಸಫಲವಾಗಿತ್ತು. ಆದರೆ ಈಗ ಇಮ್ರಾನ್ ಖಾನ್ ಬೇರೆಯವರ ಆಜ್ಞೆಯಂತೆ ಅಧಿಕಾರ ನಡೆಸುತ್ತಿದ್ದಾರೆ. ಅದಕ್ಕೆ ಅವರನ್ನು ಹಿಂದಿನ ಸೀಟಿನ ಚಾಲಕ ಎನ್ನುತ್ತೇನೆ ಎಂದು ಪ್ರಧಾನಿ ಮೇಲೆ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next