ಸೀನಿಯರ್ ಹಂತದಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ಸೆಹ್ರಾವತ್ ಅವರು ಸ್ಮಾಂಬೆಕೋವ್ ಅವರನ್ನು 9-4 ಅಂತರದಿಂದ ಸೋಲಿಸಿ ಚಿನ್ನ ಗೆದ್ದರು.
Advertisement
ದಿಲ್ಲಿಯ ಛತ್ರಶಾಲ್ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿರುವ ಸೆಹ್ರಾವತ್ ಈ ಹಿಂದಿನ ಹೋರಾಟದಲ್ಲಿ ಜಪಾನಿನ ರಿಕುಕೊ ಅರಾಯಿ ಅವರನ್ನು ಕ್ವಾರ್ಟರ್‌ಫೈನಲ್‌ನನಲ್ಲಿ 7-1 ಹಾಗೂ ಚೀನದ ವಾನ್ಹಾಹೊ ಝೊಯು ಅವರನ್ನು ಸೆಮಿಫೈನಲ್‌ನಲ್ಲಿ 7-4 ಅಂತರದಿಂದ ಉರುಳಿಸಿದ್ದರು.ಸೆಹ್ರಾವತ್ ಅವರಿಗೆ 2023ರಲ್ಲಿ ಇದು ಎರಡನೇ ಪದಕವಾಗಿದೆ. ಈ ಮೊದಲು ಫೆಬ್ರವರಿಯಲ್ಲಿ ನಡೆದ ಝಗ್ರೆಬ್ ಓಪನ್ ಕೂಟದಲ್ಲಿ ಕಂಚು ಜಯಿಸಿದ್ದರು. ಕಳೆದ ವರ್ಷ ನಡೆದ ಅಂಡರ್ 23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.