Advertisement

ಸಾಕ್ಷಿ ಮಲಿಕ್‌ಗೆ ಬೆಳ್ಳಿ; ವಿನೇಶ್‌, ಅಂಶು ಮಲಿಕ್‌ ಕಂಚಿಗೆ ಸಮಾಧಾನ

10:20 AM Feb 23, 2020 | Sriram |

ಹೊಸದಿಲ್ಲಿ: ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಭಾರತದ ವನಿತೆಯರು ದೊಡ್ಡ ಪದಕಗಳಿಂದ ದೂರಾದರು. ಸಾಕ್ಷಿ ಮಲಿಕ್‌ ಫೈನಲ್‌ನಲ್ಲಿ ಎಡವಿ ಬೆಳ್ಳಿಗೆ ಸಮಾಧಾನಪಟ್ಟರು. ವಿನೇಶ್‌ ಪೋಗಟ್‌ ಮತ್ತು ಅಂಶು ಮಲಿಕ್‌ ಕಂಚು ಗೆದ್ದರು.

Advertisement

ಒಲಿಂಪಿಕ್ಸ್‌ನಲ್ಲಿ ಇಲ್ಲದ 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಕ್ಷಿ ಮಲಿಕ್‌ ಫೈನಲ್‌ನಲ್ಲಿ ಜಪಾನಿನ ನವೋಮಿ ರುಯಿಕೆ ವಿರುದ್ಧ 0-2 ಅಂತರದ ಸೋಲನುಭವಿಸಿ ಚಿನ್ನವನ್ನು ತಪ್ಪಿಸಿಕೊಂಡರು. ಸೆಮಿಫೈನಲ್‌ನಲ್ಲಿ ಸಾಕ್ಷಿ ಉಜ್ಬೆಕಿಸ್ಥಾನದ ನಬಿರಾ ಎಸೆನ್ಬೇವಾ ವಿರುದ್ಧ 5-4 ಅಂಕಗಳ ರೋಚಕ ಜಯ ಸಾಧಿಸಿದ್ದರು.

53 ಕೆ.ಜಿ. ವಿಭಾಗದಲ್ಲಿ ವಿನೇಶ್‌ ಪೋಗಟ್‌ ವಿಯೆಟ್ನಾಮ್‌ನ ಥಿ ಲಿ ಕೀ ಅವರನ್ನು 10-0 ಅಂತರದಿಂದ ಪರಾಭವಗೊಳಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ವಿನೇಶ್‌ ಅವರನ್ನು ಜಪಾನಿನ ಮಾಯು ಮುಕೈಡಾ ಪರಾಭವಗೊಳಿಸಿದರು.

ಇದು ಮುಕೈಡಾ ವಿರುದ್ಧ ವಿನೇಶ್‌ ಅನುಭವಿಸಿದ ಸತತ 3ನೇ ಸೋಲಾಗಿದೆ. 57 ಕೆ.ಜಿ. ವಿಭಾಗದ ಕಂಚಿನ ಸ್ಪರ್ಧೆಯಲ್ಲಿ ಅಂಶು ಮಲಿಕ್‌ ಉಜ್ಬೆಕಿಸ್ಥಾನದ ಸೆವಾರ ಎಶು¾ರತೋವಾ ವಿರುದ್ಧ ಮೇಲುಗೈ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next