Advertisement

Asia TT: ಭಾರತ ಮಹಿಳಾ ಡಬಲ್ಸ್‌ ಜೋಡಿ ಸೆಮೀಸ್‌ಗೆ, ಪದಕ ಖಚಿತ

09:28 PM Oct 12, 2024 | Team Udayavani |

ಅಸ್ತಾನ (ಕಜಕಸ್ತಾನ): ಇಲ್ಲಿ ನಡೆಯುತ್ತಿರುವ ಏಷ್ಯಾ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನ ವನಿತೆಯರ ಡಬಲ್ಸ್‌ನಲ್ಲಿ ಭಾರತದ ಐಹಿಕಾ ಚಟರ್ಜಿ ಮತ್ತು ಸುತೀರ್ಥ ಚಟರ್ಜಿ ಸೆಮಿಫೈನಲ್‌ಗೇರಿದ್ದಾರೆ.

Advertisement

ಈ ಮೂಲಕ ಭಾರತ ಈ ವಿಭಾಗದಲ್ಲಿ ಚೊಚ್ಚಲ ಪದಕ ಗೆಲ್ಲುವುದು ಖಾತರಿಯಾಗಿದೆ. ಈ ಕೂಟದ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ ಇದೇ ಮೊದಲ ಪದಕವಾಗಿದೆ. ಮುಖರ್ಜಿದ್ವಯರು ಕ್ವಾರ್ಟರ್‌ಫೈನಲ್‌ ಹೋರಾಟದಲ್ಲಿ ದಕ್ಷಿಣ ಕೊರಿಯಾದ ಕಿಮ್‌ ನಯಿಯಾಂಗ್‌ ಮತ್ತು ಲೀ ಎನ್‌ಹ್ಯುಯಿ ಅವರನ್ನು 10-12, 11-7, 11-9, 11-8 ಅಂತರದಿಂದ ಸೋಲಿಸಿದರು.

ಮಾನವ್‌, ಮಾನುಷ್‌ ಉತ್ತಮ ಆಟ: ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಮಾನವ್‌ ಥಕ್ಕರ್‌ ಮತ್ತು ಮಾನುಷ್‌ ಶಾ ಅವರು ಅಮೋಘ ಆಟದ ಪ್ರದರ್ಶನ ನೀಡಿ ಪ್ರೀಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ. 60ನೇ ರ್‍ಯಾಂಕಿನ ಮಾನವ್‌ ವಿಶ್ವ 14ನೇ ರ್‍ಯಾಂಕಿನ ದಕ್ಷಿಣ ಕೊರಿಯದ ಜಾಂಗ್‌ ವೂಜಿನ್‌ ಅವರನ್ನು ಸೋಲಿಸಿ ಅಚ್ಚರಿಯ ಫ‌ಲಿತಾಂಶಕ್ಕೆ ಕಾರಣರಾದರು. ಇನ್ನೊಂದು ಪಂದ್ಯದಲ್ಲಿ ಮಾನುಷ್‌ ದಕ್ಷಿಣ ಕೊರಿಯದ ಆನ್‌ ಜಯಿಹ್ಯುನ್‌ ಅವರನ್ನು ಸೋಲಿಸಿ ಮುನ್ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next